ಖರೀದಿಸಿದ 5 ವರ್ಷಗಳಲ್ಲಿ ಮನೆ ಕಟ್ಟದಿದ್ದರೆ ನಿವೇಶನ ಹಂಚಿಕೆ ರದ್ದು: ಬಿಡಿಎ

ನಿವೇಶನ ಪಡೆದ 5 ವರ್ಷಗಳಲ್ಲಿ ಮನೆ ನಿರ್ಮಾಣ ಮಾಡದಿದ್ದರೆ ಹಂಚಿಕೆ ರದ್ದುಪಡಿಸಲು ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ...
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು: ನಿವೇಶನ ಪಡೆದ 5 ವರ್ಷಗಳಲ್ಲಿ ಮನೆ ನಿರ್ಮಾಣ ಮಾಡದಿದ್ದರೆ ಹಂಚಿಕೆ ರದ್ದುಪಡಿಸಲು ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿದೆ.

1984ರ ಬಿಡಿಎ ಮಂಜೂರಾತಿ ಕಾಯ್ದೆಯ ನಿಯಮ 13 (7)ರ ಪ್ರಕಾರ ನಿವೇಶನ ನೋಂದಾಯಿಸಿ ಸ್ವಾಧೀನಪಡಿಸಿಕೊಂಡ 5 ವರ್ಷಗಳಲ್ಲಿ ಮನೆ ನಿರ್ಮಾಣ ಮಾಡಬೇಕು’ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ. ಪ್ರಾಧಿಕಾರ ನೀಡಿರುವ ವಿಸ್ತರಣಾ ಅವಧಿ ಮುಗಿದರೂ ಕೆಲವರು ಮನೆ ನಿರ್ಮಾಣ ಮಾಡಿಲ್ಲ. ಹೀಗಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಖಾಲಿ ನಿವೇಶನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕೆಲವು ಬಡಾವಣೆಗಳನ್ನು ಹೊರತುಪಡಿಸಿ ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹೀಗಿದ್ದರೂ ನಿವೇಶನ ಪಡೆದವರು ಮನೆ ನಿರ್ಮಿಸಿಲ್ಲ. ಕೆಲವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ನಿಗದಿತ ಅವಧಿಯಲ್ಲಿ ಮನೆ ಕಟ್ಟದವರ ನಿವೇಶನ ಹಂಚಿಕೆ ರದ್ದು ಪಡಿಸಲಾಗುವುದು ಎಂದು  ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com