ಪ್ರಶ್ನೆ ಪತ್ರಿಕೆ ಸೋರಿಕೆ: ಆರೋಪಿ ವಿದ್ಯಾರ್ಥಿಯ ಪಿಎಚ್ ಡಿ ನೋಂದಣಿ ರದ್ದು ಸಾಧ್ಯತೆ

ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಆರೋಪಿ ಮೈಸೂರು ಮೂಲದ ವಿದ್ಯಾರ್ಥಿ ನಾಗೇಂದ್ರ ಪಿಎಚ್ ಎಚ್ ಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಆರೋಪಿ ಮೈಸೂರು ಮೂಲದ ವಿದ್ಯಾರ್ಥಿ ನಾಗೇಂದ್ರ ಪಿಎಚ್ ಎಚ್ ಡಿ ನೋಂದಣಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 
ನಾಗೇಂದ್ರ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ(ಪಿಎಚ್ ಡಿ) ವಿದ್ಯಾರ್ಥಿ. ಈತ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ಆರೋಪಿ ಶಿವಕುಮಾರಸ್ವಾಮಿಯೊಂದಿಗೆ ಸಂಪರ್ಕ ಹೊಂದಿದ್ದನು. ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಶಿವಕುಮಾರಸ್ವಾಮಿಯಿಂದ ಪಡೆದ ನಾಗೇಂದ್ರ ಸೋರಿಕೆ ಮಾಡಿದ್ದಾನೆ ಎಂದು ಸಿಐಡಿ ತನಿಖೆಯಿಂದ ತಿಳಿದು ಬಂದಿದೆ. 
ಈ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆತನ ನೋಂದಣಿಯನ್ನು ರದ್ದು ಮಾಡುಲು ನಿರ್ಧರಿಸಿದೆ. ಆದರೆ, ಕ್ರಮಕ್ಕೂ ಮುನ್ನ ಒಂದು ಬಾರಿ ಚರ್ಚೆ ನಡೆಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಆರೋಪಿ ನಾಗೇಂದ್ರ ತಲೆಮರೆಸಿಕೊಂಡಿದ್ದಾನೆ. 
ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಈ ಅಂಶವನ್ನು ಪತ್ತೆ ಹಚ್ಚಿದ್ದು, ನಾಗೇಂದ್ರನಿಂದ ಪ್ರಶ್ನೆಪತ್ರಿಕೆ ಪಡೆದು ಮಾರಾಟ ಮಾಡಿದ್ದ ಉಲ್ಲಾಳದ ನಿವಾಸಿ, ರಿಯಲ್‌ ಎಸ್ಟೇಟ್‌ ಉದ್ಯಮಿ ಅನಿಲ್‌ಕುಮಾರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಎರಡೂ ಬಾರಿ ಆರೋಪಿಗಳಿಗೆ ಪ್ರಶ್ನೆಪತ್ರಿಕೆ ಒದಗಿಸಿದ್ದು ಮಾತ್ರ ಶಿವಕುಮಾರಸ್ವಾಮಿ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com