ಮೈಸೂರು: ಬರ ಪೀಡಿತ ಜಿಲ್ಲೆಗಳ ಅಧ್ಯಯನ ಮತ್ತು ಬರ ನಿರ್ವಹಣೆ ಕಾರ್ಯಕ್ರಮಗಳ ಪರಿಶೀಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆಯಿಂದ ಬರ ಪ್ರವಾಸ ಆರಂಭಿಸಿದ್ದಾರೆ. ಆದರೆ, ಸಚಿವರು ಮಾತ್ರ ಇನ್ನು ಪ್ರವಾಸ ಕೈಗೊಳ್ಳದೇ ಇತರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.
ಬರ ಪರಿಶೀಲನೆ ಪರಿಸ್ಥಿತಿ ಬಗ್ಗೆ ಸಚಿವರಗಳ ತಂಡ ಇನ್ನು ಪ್ರವಾಸಕೈಗೊಳ್ಳದೇ ಇರುವುದು ರೈತರಲ್ಲಿ ಬೇಸರ ತಂದಿದೆ. ರಾಜ್ಯದ ಮುಖ್ಯಮಂತ್ರಿಗಳೇ ಬರ ಪ್ರವಾಸ ಆರಂಭಿಸಿದ್ದರೂ, ಸಚಿವರು ಮಾತ್ರ ಇತರೆ ಕಾರ್ಯಕ್ರಮಗಳಲ್ಲಿ ತೊಡಗಿರುವುದು ಬರ ಪರಿಸ್ಥಿತಿ ಬಗ್ಗೆ ಅವರ ಆಸಕ್ತಿ ಎಷ್ಟಿದೆ ಎಂದು ತೋರುತ್ತದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬರ ಪೀಡಿತ ಜಿಲ್ಲೆಗಳ ಅಧ್ಯಯನ ಮತ್ತು ಬರ ನಿರ್ವಹಣೆ ಕಾರ್ಯಕ್ರಮಗಳ ಪರಿಶೀಲನೆಗೆ 16 ಸಚಿವರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಏಪ್ರಿಲ್ 15ರಿಂದ ಈ ಸಚಿವರ ತಂಡ ಬರ ಪ್ರವಾಸ ಕೈಗೊಳ್ಳಬೇಕಿತ್ತು.
ಕಾಂಗ್ರೆಸ್ ಆಡಳಿತತದಲ್ಲಿ 2015ರಲ್ಲಿ 1,200 ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗಾಗಿ, ರೈತರ ಸಮಸ್ಯೆ ಮತ್ತು ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲು ಬಿಜೆಪಿ ಬರ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ಬರ ಪ್ರವಾಸ ಕೈಗೊಳ್ಳುವುದಾಗಿ ಹೇಳಿತ್ತು.
ಆದರೆ, ಪ್ರಸ್ತುತ ರಾಜ್ಯ ಸಚಿವರು ತಮ್ಮದೇ ಆದ ಇತರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಏಪ್ರಿಲ್ 22ರನಂತರ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.