ಸಿದ್ದರಾಮಯ್ಯನವರ ವಿಮಾನ ಪ್ರಯಾಣ ವೆಚ್ಚ 20.11 ಕೋಟಿ ರೂಪಾಯಿ!

ಮುಖ್ಯಮಂತ್ರಿ ಸಿದ್ದರಾಮಯ್ಯನವರ 32 ತಿಂಗಳ ಆಡಳಿತಾವಧಿಯಲ್ಲಿ ಅವರ ವಿಮಾನ ಪ್ರಯಾಣಕ್ಕೆ 20 ಕೋಟಿಯ...
ಬೆಳಗಾವಿಯ ಸಂಬ್ರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿಯ ಸಂಬ್ರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ 32 ತಿಂಗಳ ಆಡಳಿತಾವಧಿಯಲ್ಲಿ ಅವರ ವಿಮಾನ ಪ್ರಯಾಣಕ್ಕೆ 20 ಕೋಟಿಯ 11 ಲಕ್ಷ ರೂಪಾಯಿ ಸರ್ಕಾರ ವೆಚ್ಚ ಮಾಡಿದೆ. ಅವರ ಸಂಪುಟದ 15 ಮಂದಿ ಸಚಿವರು 2 ಕೋಟಿಯ 27 ಲಕ್ಷ ರೂಪಾಯಿ ಖರ್ಚು ಮಾಡಿದ್ದರೆ 17 ಮಂದಿ ಇತರ ಸದಸ್ಯರು ತಮ್ಮ ವಿಮಾನ ಪ್ರಯಾಣದ ವೆಚ್ಚದ ವಿವರವನ್ನು ನೀಡಿಲ್ಲ. ಸರ್ಕಾರದ ಖಜಾನೆಯಿಂದ ಸರ್ಕಾರದ ಜನಪ್ರತಿನಿಧಿಗಳ ವಿಮಾನ ಪ್ರಯಾಣವೊಂದಕ್ಕೇ ಇದುವರೆಗೆ 33 ಕೋಟಿಯ 50 ಲಕ್ಷ ರೂಪಾಯಿ ಖರ್ಚಾಗಿದೆ.

ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗದದ್, ಆರ್ ಟಿಐ ಕಾಯ್ದೆಯಡಿ ಈ ಮಾಹಿತಿ ಪಡೆದುಕೊಂಡಿದ್ದು, ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದರು. ಮೇ 13, 2013ರಿಂದ ಮಾರ್ಚ್ 31, 2014ರವರೆಗೆ ಮುಖ್ಯಮಂತ್ರಿಯವರು ವಿಮಾನ ಪ್ರಯಾಣಕ್ಕೆ 9 ಕೋಟಿ ರೂಪಾಯಿ, 2014-15ರಲ್ಲಿ 5.81 ಕೋಟಿ ಹಾಗೂ ಜನವರಿ 31, 2016ರವರೆಗೆ 4.60 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ ಎಂದರು.

ಸ್ವತಃ ಕಾಂಗ್ರೆಸ್ ಸದಸ್ಯರಾಗಿರುವ ಗದದ್, ಸರ್ಕಾರ ಮೂರು ವರ್ಷಗಳನ್ನು ಪೂರೈಸುತ್ತಾ ಬಂದರೂ ಕೂಡ ರಾಜ್ಯದ ರೈತರ ಸಮಸ್ಯೆಗಳನ್ನು, ಮರಳು ಮಾಫಿಯಾ ಮೊದಲಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಸಚಿವರುಗಳು ಪ್ರಯಾಣಕ್ಕೇ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಕಳೆದ 22 ತಿಂಗಳಲ್ಲಿ ಸರ್ಕಾರ 39 ಸಾವಿರದ 161 ಕೋಟಿ ರೂಪಾಯಿಗಳಷ್ಟು ಭಾರೀ ಮೊತ್ತದ ಸಾಲವನ್ನು ಪಡೆದುಕೊಂಡಿದೆ ಎಂದು ಸಹ ಗದದ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com