
ಬೆಂಗಳೂರು: ಇರಾಕ್ - ಸಿರಿಯಾ ಇಸ್ಲಾಮಿಕ್ ಉಗ್ರ ಸಂಘಟನೆಯಾಗಿರುವ ಐಸಿಸ್‌ಗೆ ಭಾರತದಲ್ಲಿ ನೇಮಕಾತಿ ನಡೆಸುತ್ತಿದ್ದ ಕರ್ನಾಟಕದ ಭಟ್ಕಳ ಮೂಲದ 26ರ ಹರೆಯದ ಮೊಹಮ್ಮದ್ ಶಫಿ ಅರ್ಮಾರ್, ಅಮೆರಿಕ ನಡೆಸಿರುವ ವೈಮಾನಿಕ ದಾಳಿಯಲ್ಲಿ ಹತನಾಗಿದ್ದಾನೆ ಎಂದು ಕಳೆದ ಕೆಲವು ದಿನಗಳ ಹಿಂದೆ ತಿಳಿದುಬಂದಿದೆ.
ಅಮೆರಿಕದಿಂದ ಈ ಮಾಹಿತಿ ಸಿಕ್ಕಿದೆ. ಶಫಿ ಅಲಿಯಾಸ್ ಯೂಸುಫ್ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆಯ sleeper cell ಗಳನ್ನು ರಚಿಸುವಲ್ಲಿ ಮತ್ತು ಉಗ್ರ ಸಂಘಟನೆಗೆ ಅಮಾಯಕ ಯುವಕರನ್ನು ಬುದ್ಧಿಪಲ್ಲಟಗೊಳಿಸಿ ಸೇರಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದ ಎಂದು ವರದಿ ತಿಳಿಸಿದೆ.
ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದ್ ಗೆ ನೆರವಾಗುವುದು ಮತ್ತು ಭಾರತದಲ್ಲಿ ಐಸಿಸ್ ನೆಲೆವೂರುವಂತೆ ಮಾಡುವಲ್ಲಿ ಭೂಗತ ಕಾರ್ಯಾಚರಣೆ ನಡೆಸುವುದು ಶಫಿಯ ಮುಖ್ಯ ಹೊಣೆಗಾರಿಕೆಯಾಗಿತ್ತು.
26ರ ಹರೆಯದ ಮೊಹಮ್ಮದ್ ಶಫಿ ಯ ಅಣ್ಣ ಸುಲ್ತಾನ್ ಅರ್ಮಾರ್ ಕಳೆದ ವರ್ಷದ ತನಕವೂ ಭಾರತದಲ್ಲಿ ಐಸಿಸ್ ಸಂಘಟನೆಯ ನೇತೃತ್ವ ವಹಿಸಿ ದುಡಿಯುತ್ತಿದ್ದ. ಆತ 2015ರ ಮಾರ್ಚ್‌ನಲ್ಲಿ ಅಮೆರಿಕ ವಾಯು ಪಡೆಯ ವೈಮಾನಿಕ (ಡ್ರೋನ್) ದಾಳಿಯಲ್ಲಿ ಹತನಾಗಿದ್ದ.
ರಾಷ್ಟ್ರೀಯ ತನಿಖಾ ದಳ ಮತ್ತು ಜಾಗೃತ ವಿಭಾಗ ದೇಶಾದ್ಯಂತ ದಾಳಿ ನಡೆಸಿ ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ 14 ಜನರನ್ನು ಬಂಧಿಸಿದ್ದು, ಅವರಲ್ಲಿ ಆರು ಮಂದಿ ಕರ್ನಾಟಕದವರಾಗಿದ್ದರು.
Advertisement