ವೈದ್ಯಕೀಯ ಕೋರ್ಸ್ ಪರೀಕ್ಷೆ: ಅಕ್ರಮ ತಡೆಯಲು ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ

ಪರೀಕ್ಷೆ ವೇಳೆ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನಾಡಿದ್ದು ಅಂದರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪರೀಕ್ಷೆ ವೇಳೆ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನಾಡಿದ್ದು ಅಂದರೆ ಮೇ 1ರಂದು ನಡೆಯಲಿರುವ ಎಐಪಿಎಂಟಿ ಪರೀಕ್ಷೆ ವೇಳೆ ಯಾವುದೇ ಅಕ್ರಮ ನಡೆಯದಂತೆ ಎಚ್ಚರ ವಹಿಸಲು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ವಿದ್ಯಾರ್ಥಿಗಳು ಧರಿಸುವ ಉಡುಪಿನ ಮೇಲೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ.

ದೇಶಾದ್ಯಂತ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್ ಗಳಿಗೆ ಎನ್ ಇಇಟಿ ಮೂಲಕ ಎರಡು ಹಂತಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು ಮೊದಲ ಹಂತ ನಾಡಿದ್ದು ಭಾನುವಾರ ನಡೆಯಲಿದೆ. ಈ ಸಂದರ್ಭದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವ ರೀತಿಯ ಉಡುಪು ಧರಿಸಬೇಕೆಂದು ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.

ಏನು ವಸ್ತ್ರ ಸಂಹಿತೆ: ಅಭ್ಯರ್ಥಿಗಳು ಕಡು ಬಣ್ಣದ ಬಟ್ಟೆಯನ್ನು ಧರಿಸಕೂಡದು. ಅರ್ಧ ತೋಳಿನ ಅಂಗಿ ಧರಿಸಬೇಕು ಮತ್ತು ಅದರಲ್ಲಿ ದೊಡ್ಡ ಬಟನ್ ಗಳು, ಬ್ಯಾಡ್ಜ್ ಅಥವಾ ಪದಕವಿರಬಾರದು. ಯಾಕೆಂದರೆ ಇವುಗಳ ಎಡೆಯಲ್ಲಿ ಯಾವುದಾದರೂ ವಸ್ತುವನ್ನು ಅಡಗಿಸಿಡುವ ಸಾಧ್ಯತೆಯಿರುತ್ತದೆ. ಆಭರಣಗಳನ್ನು ಧರಿಸಿಕೊಂಡು ಬಂದ ಅಭ್ಯರ್ಥಿಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು. ಅಭ್ಯರ್ಥಿಗಳು ಸ್ಲಿಪ್ಪರ್ ಅಥವಾ ಸ್ಯಾಂಡಲ್ಸ್ ಹಾಕಬಹುದು, ಆದರೆ ಶೂ ಧರಿಸಿಕೊಂಡು ಪರೀಕ್ಷಾ ಕೊಠಡಿಗೆ ಪ್ರವೇಶಿಸಬಾರದು.
ಚೀಲ, ಕೈ ಚೀಲ, ಹೇರ್ ಪಿನ್, ಹೇರ್ ಬ್ಯಾಂಡ್, ಬೆಲ್ಟ್ ಮತ್ತು ಕ್ಯಾಪ್ ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವ ಹಾಗಿಲ್ಲ. ಇನ್ನು ಪೆನ್ನು, ಸ್ಕೇಲ್, ಕ್ಯಾಲ್ಕುಲೇಟರ್, ಪ್ಲಾಸ್ಟಿಕ್ ಪೌಚ್, ರೈಟಿಂಗ್ ಪಾಡ್ ಕೂಡ ನಿಷೇಧ ಹೇರಲಾಗಿದೆ.
ಆದರೆ ಕೆಲವು ಧಾರ್ಮಿಕ ಮತ್ತು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ಅವರು ಮಾತ್ರ ಒಂದು ಗಂಟೆಗೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು ಎಂದು ಸಿಬಿಎಸ್ ಇ ಸೂಚನೆ ನೀಡಿದೆ.

ಕಳೆದ ವರ್ಷ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಅಕ್ರಮ ನಡೆದು ಪರೀಕ್ಷೆ ರದ್ದಾಗಿ ಮರು ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಈ ವರ್ಷ ಸಿಬಿಎಸ್ ಇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com