ಮಕ್ಕಳಿಗೆ ಕಥೆ ಹೇಳಿ ಲಿಮ್ಕಾ ದಾಖಲೆ ಸೇರಿದ 'ಕಲಾ ಸುರುಚಿ'

ಚಿಕ್ಕ ಮಕ್ಕಳಿಗೆ ಕಥೆ ಹೇಳುವ ಹಳೆ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತವಾಗಿರುವ ಮೈಸೂರಿನ...
ಕಲಾ ಸುರುಚಿಯಲ್ಲಿ ಮಕ್ಕಳಿಗೆ ಕಥೆ ಹೇಳುತ್ತಿರುವುದು
ಕಲಾ ಸುರುಚಿಯಲ್ಲಿ ಮಕ್ಕಳಿಗೆ ಕಥೆ ಹೇಳುತ್ತಿರುವುದು

ಮೈಸೂರು: ಚಿಕ್ಕ ಮಕ್ಕಳಿಗೆ ಕಥೆ ಹೇಳುವ ಹಳೆ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತವಾಗಿರುವ ಮೈಸೂರಿನ 'ಕಲಾ ಸುರುಚಿ' ಕೇಂದ್ರ ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದೆ.

ಮೈಸೂರಿನ ಕುವೆಂಪುನಗರ ಪ್ರದೇಶದಲ್ಲಿರುವ ಕೇಂದ್ರದಲ್ಲಿ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಕಥೆಗಳನ್ನು ನಾಡಿನ ಗಣ್ಯ ವ್ಯಕ್ತಿಗಳು ವಿವರಿಸುತ್ತಾರೆ. ಇದಕ್ಕೆ ಕಥೆ ಕೇಳೋಣ ಬನ್ನಿ ಎಂಬುದಾಗಿ ಹೆಸರಿಡಲಾಗಿದೆ. ಈ ಕಥೆ ಹೇಳುವ ಕೆಲಸ ಇಲ್ಲಿ ಒಂಭತ್ತು ವರ್ಷಗಳಿಂದ ನಡೆಯುತ್ತಾ ಬಂದಿದೆ.

''ಮನರಂಜನೆ ಮೂಲಕ ಜ್ಞಾನ'' ಕಲಾ ಸುರುಚಿ ಕೇಂದ್ರದ ಮುಖ್ಯ ಧ್ಯೇಯವಾಗಿದೆ. ಸುರುಚಿ ರಂಗಮನೆ ಎಂಬುವವರು ಪ್ರತಿ ಶನಿವಾರ 4.30ರಿಂದ 5.30ರವರೆಗೆ ತಪ್ಪದೆ ಇಲ್ಲಿ ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮ ನಡೆಸುತ್ತಾರೆ. ಇದುವರೆಗೆ 482 ಕಥೆ ಹೇಳುವ ಕಾರ್ಯಕ್ರಮ ಇವರು ಮಾಡಿದ್ದಾರೆ.ಸಾವಿರಾರು ಮಕ್ಕಳು ಇಲ್ಲಿ ಬಂದು ಕಥೆ ಕೇಳುತ್ತಾರೆ.

ಈ  ಕೇಂದ್ರ ಮಕ್ಕಳಿಗೆ ಕಥೆ ಹೇಳುವ ಕಾರ್ಯ ಆರಂಭಿಸಿದ್ದು 2007ರಲ್ಲಿ. ಪ್ರಸ್ತುತ ಕಾಲಕ್ಕೆ ಸಂಬಂಧಪಟ್ಟ ವಿಷಯಗಳ ಕಥೆಗಳು, ಜನಪದ, ಮಹಾಕಾವ್ಯ, ಇತಿಹಾಸ, ಸಂಸ್ಕೃತಿ ಮತ್ತು ಗಣ್ಯ ವ್ಯಕ್ತಿಗಳ ಕುರಿತು ಸಮಾಜದ ವಿವಿಧ ಕ್ಷೇತ್ರಗಳ ಜನರು ಮಕ್ಕಳಿಗೆ ಕಥೆ ಹೇಳುತ್ತಾರೆ. ಕೇಳಿದ ಕಥೆಗಳನ್ನು ಬರೆಯುವಂತೆಯೂ ಮಕ್ಕಳಿಗೆ ಹೇಳುತ್ತಾರೆ. ರಾಮಾಯಣ ಮತ್ತು ಮಹಾಭಾರತ ಕಥೆಗಳನ್ನು25 ವಾರಗಳ ಕಾಲ ಮಕ್ಕಳಿಗೆ ವಿವರಿಸಲಾಗಿದೆ. ಇದುವರೆಗೆ ಮಕ್ಕಳಿಗೆ ವಿವರಿಸಿದ ಕಥೆಗಳನ್ನು ಒಟ್ಟು ಸೇರಿಸಿ ಡಿವಿಡಿ ಮಾಡಿ ಶಾಲೆಗಳಿಗೆ ಮತ್ತು ಆಸಕ್ತ ಪೋಷಕರಿಗೆ ಹಂಚುವ ಉದ್ದೇಶವಿದೆ. ಮತ್ತು ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡುವ ಯೋಜನೆಯಿದೆ ಎನ್ನುತ್ತಾರೆ ಕಲಾ ಸುರುಚಿ ಕೇಂದ್ರದ ಸದಸ್ಯ ಪ್ರೊ.ಕೆ.ವಿ.ಶ್ರೀಧರ್ ಮೂರ್ತಿ.

ಇದೀಗ ಈ ಕೇಂದ್ರದ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವ ಬಗ್ಗೆ ಅವರಿಗೆ ಹೆಮ್ಮೆಯಿದೆ. ಇನ್ನು ಮುಂದೆ ನಮ್ಮ ಜವಾಬ್ದಾರಿ ಹೆಚ್ಚಾಗಲಿದ್ದು, ಕಥೆಗಳನ್ನು ಇನ್ನಷ್ಟು ಮಕ್ಕಳಿಗೆ ತಲುಪಿಸುವ ಬಗ್ಗೆ ನಾವು ಮುತುವರ್ಜಿ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಅವರು.

''ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳು ಹೆಚ್ಚಾಗಿದ್ದವು. ಆಗ ಅಜ್ಜ-ಅಜ್ಜಿಯಂದಿರು ಮೊಮ್ಮಕ್ಕಳಿಗೆ ಕಥೆ ಹೇಳುತ್ತಿದ್ದರು. ಇದೀಗ ಕಾಲ ಬದಲಾಗಿದೆ, ಜನರ ಜೀವನಶೈಲಿಯೂ ಬದಲಾಗಿದೆ. ವಿಭಕ್ತ ಕುಟುಂಬಗಳು ಹೆಚ್ಚಾಗಿ ಕಾಣಿಸುತ್ತಿವೆ. ಕಥೆ ಕೇಳುವುದರಿಂದ ಮಕ್ಕಳ ಮನಸ್ಸಿನಲ್ಲಿ ಸೃಜನಾತ್ಮಕ ಕಲೆ, ಒಳ್ಳೆಯ ಗುಣ, ಮಾನವ ಸಂಬಂಧಗಳನ್ನು ಪ್ರೀತಿಸುವ, ನೈತಿಕತೆ ಮತ್ತು ಶಿಸ್ತು ಮೂಡುತ್ತದೆ.ಕಥೆ ಕೇಳುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಜ್ಞಾನ ವೃದ್ಧಿಯಾಗುತ್ತದೆ ಎನ್ನುತ್ತಾರೆ ಕಲಾ ಸುರುಚಿ ಕೇಂದ್ರದ ಸಂಚಾಲಕ ಡಾ. ಹೆಚ್ ಕೆ ರಾಮನಾಥ್.

''ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನರಗ ಪ್ರದೇಶಗಳ ಮಕ್ಕಳು ಟಿವಿ ನೋಡುವುದರಲ್ಲಿ ಮತ್ತು ಕಂಪ್ಯೂಟರ್ ಗೇಮ್ ಗಳನ್ನು ಆಡುವುದರಲ್ಲಿಯೇ ಕಳೆಯುತ್ತಾರೆ. ನಮ್ಮ ಕೇಂದ್ರದಲ್ಲಿ ಕೆಲವು ಮಕ್ಕಳು ಕಳೆದ ಎರಡು ವರ್ಷಗಳಿಂದ ಒಂದು ಕಥೆಯನ್ನೂ ಕೂಡ ತಪ್ಪದೆ ಕೇಳಿಕೊಂಡು ಬಂದಿದ್ದಾರೆ. ಕಥೆ ಕೇಳುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ, ಆತ್ಮ ವಿಶ್ವಾಸ ಹೆಚ್ಚುತ್ತದೆ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳ ಎಲ್ಲಾ ರೀತಿಯ ಭವಿಷ್ಯದ ದೃಷ್ಟಿಯಿಂದ ಉತ್ತಮ ಎನ್ನುತ್ತಾರೆ ಸುನಿಲ್ ಮತ್ತು ಆರತಿ.

ಕೇಂದ್ರದ ಹುಟ್ಟು: ಕಲಾ ಸುರುಚಿ ಕೇಂದ್ರವನ್ನು ಆರಂಭಿಸಿದವರು ಖ್ಯಾತ ನಾಟಕಕಾರ ದಿವಂಗತ ಅನಂತಮೂರ್ತಿಯವರು. ಮೈಸೂರಿನ ಕುವೆಂಪುನಗರದಲ್ಲಿ 1985ರಲ್ಲಿ ಮಿನಿ ಥಿಯೇಟರ್ ನಲ್ಲಿ ಆರಂಭಗೊಂಡಿತು.ಅವರ ನಿಧನ ನಂತರ ಅವರ ಪತ್ನಿ ವಿಜಯಾ ಸಿಂಧುವಲ್ಲಿ ಅದನ್ನು ಮುಂದುವರಿಸಿಕೊಂಡು ಹೋದರು. ಅವರ ಕುಟುಂಬ ಸದಸ್ಯರಾದ ಸುಮನಾ ಮತ್ತು ಶಶಿಧರ್ ಡೋಂಗ್ರೆ ಕೂಡ ಈ ಕಾಯಕದಲ್ಲಿ ವಿಜಯಾ ಅವರಿಗೆ ಕೈ ಜೋಡಿಸುತ್ತಾರೆ. ವಿವಿಧ ಕಾರ್ಯಕ್ರಮಗಳಾದ ಕಥೆ ಕೇಳೋಣ ಬನ್ನಿ, ನಾಟಕ ವಚನ, ರಂಗ ಗೀತೆ, ಸಾಹಿತ್ಯ ಚಾವಡಿ, ನಾಟಕಗಳು, ಸೆಮಿನಾರುಗಳು, ಥಿಯೇಟರ್ ವರ್ಕ್ ಶಾಪ್, ಜನಪದ ಕಲೆಗಳು, ಹರಿಕಥೆ, ಸಂಗೀತ ಹೀಗೆ ಅನೇಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com