ಕೆಐಎಡಿಬಿ-ಇಟಾಸ್ಕ ಹಗರಣ: ಕಟ್ಟಾ ಸುಬ್ರಮಣ್ಯ ಅರ್ಜಿ ವಜಾ

ಇಟಾಸ್ಕ ಹಾಗೂ ಕೆಐಎಡಿಬಿ ಕಂಪನಿಗಳ ಬಹುಕೋಟಿ ರೂಪಾಯಿ ಹಗರಣದ ಆರೋಪಿ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸಬೇಕು...
ಕಟ್ಟಾ ಸುಬ್ರಮಣ್ಯ ನಾಯ್ಡು
ಕಟ್ಟಾ ಸುಬ್ರಮಣ್ಯ ನಾಯ್ಡು
ಬೆಂಗಳೂರು: ಇಟಾಸ್ಕ ಹಾಗೂ ಕೆಐಎಡಿಬಿ ಕಂಪನಿಗಳ ಬಹುಕೋಟಿ ರೂಪಾಯಿ ಹಗರಣದ ಆರೋಪಿ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸಬೇಕು ಎಂದು ಕೋರಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. 
ಹೈಕೋರ್ಟ್ ನ್ಯಾಯಾಮೂರ್ತಿ ಎ ವಿ ಚಂದ್ರಶೇಖರ ಅವರಿದ್ದ ಏಕಸದಸ್ಯ ಪೀಠ ಕಟ್ಟಾ ಸುಬ್ರಮಣ್ಯ ಅರ್ಜಿಯನ್ನು ವಜಾಗೊಳಿಸಿದೆ. 
ಪ್ರಕರಣದ ಮತ್ತೊಬ್ಬ ಸಹ ಆರೋಪಿ ಶ್ರೀನಿವಾಸ ಅವರನ್ನು ಇದೇ ಹೈಕೋರ್ಟ್ ನ ಮತ್ತೊಂದು ಏಕಸದಸ್ಯ ಪೀಠವು ಆರೋಪ ಮುಕ್ತಗೊಳಿಸಿದೆ. ಈ ಹಿನ್ನಲೆಯಲ್ಲಿ ತಮ್ಮನ್ನೂ ಆರೋಪ ಮುಕ್ತಗೊಳಿಸಿ ಎಂದು ನ್ಯಾಯಾಲಯದಲ್ಲಿ ಕಟ್ಟಾ ಮನವಿ ಮಾಡಿದ್ದರು. 
ಆದರೆ ಇದನ್ನು ವಿರೋಧಿಸಿದ ಲೋಕಾಯುಕ್ತ ಪರ ವಕೀಲ, ಶ್ರೀನಿವಾಸ ಅವರನ್ನು ಮುಕ್ತಗೊಳಿಸಲು ನೀಡಿರುವ ಆದೇಶದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಾಗಿ ಅನ್ವಯಿಸಲಾಗಿದೆ. ಅದಲ್ಲದೇ, ಕಟ್ಟಾ ಸುಬ್ರಮಣ್ಯ ಅವರು ಪ್ರಕರಣದ ಮೊದಲ ಆರೋಪಿ, ಅವರ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಹಾಗಾಗಿ, ಅವರನ್ನು ಆರೋಪ ಮುಕ್ತಗೊಳಿಸಬಾರದು ಎಂದು ವಾದಿಸಿದರು. 
ಈ ಹಿನ್ನಲೆಯಲ್ಲಿ ಕಟ್ಟಾ ಅವರ ಅರ್ಜಿಯನ್ನು ನ್ಯಾಯಾಪೀಠ ವಜಾಗೊಳಿಸಿದ್ದು, ಜೂನ್ 30ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com