ಬಿಇಎಲ್ ಲೇ ಔಟ್ ಗೆ ಕೊಳವೆಗಳ ಮೂಲಕ ನೈಸರ್ಗಿಕ ಅನಿಲ ಸಂಪರ್ಕ

ಮೇ ತಿಂಗಳ ಕೊನೆಯ ಹೊತ್ತಿಗೆ ಬಿಇಎಲ್ ಲೇ ಔಟ್ ಸುತ್ತಮುತ್ತ ನಗರದಲ್ಲಿಯೇ ಮೊದಲ ಅನಿಲ ಕೊಳವೆ ಸಂಪರ್ಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೇ ತಿಂಗಳ ಕೊನೆಯ ಹೊತ್ತಿಗೆ ಬಿಇಎಲ್ ಲೇ ಔಟ್ ಸುತ್ತಮುತ್ತ ನಗರದಲ್ಲಿಯೇ ಮೊದಲ ಅನಿಲ ಕೊಳವೆ ಸಂಪರ್ಕ ಸಿಗಲಿದೆ.

ಅಂದರೆ ಇನ್ನು ಮುಂದೆ ಇಲ್ಲಿನ ನಿವಾಸಿಗಳು ಎಲ್ ಪಿಜಿ ಗ್ಯಾಸ್ ಮುಗಿದರೆ ಬುಕ್ ಮಾಡಿ ಬರುವವರೆಗೆ ಕಾಯಬೇಕಾಗಿಲ್ಲ. ಪೈಪ್ ಲೈನ್ ಮೂಲಕ ನೇರವಾಗಿ ಅಡುಗೆ ಮನೆಗೆ ಪೂರೈಕೆಯಾಗುತ್ತದೆ. ಗ್ರಾಹಕರು ಎಷ್ಟು ಗ್ಯಾಸ್ ನ್ನು ಬಳಸಿದ್ದಾರೆ ಎಂದು ತಿಳಿಯಲು ಮೀಟರ್ ನ್ನು ಅಳವಡಿಸಲಾಗುತ್ತದೆ. ಬಳಕೆಯ ಆಧಾರದ ಮೇಲೆ ಹಣ ಪಾವತಿಸಿದರೆ ಆಯಿತು.
 
ಈಗಾಗಲೇ ಬಿಇಎಲ್ ಲೇ ಔಟ್ ಸುತ್ತಮುತ್ತಲಿನ ಮನೆಗಳಲ್ಲಿ ಅನಿಲ ಕೊಳವೆ ಸಂಪರ್ಕದ ಮೂಲಭೂತ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತದೆ. ಮುಂದಿನ ತಿಂಗಳಾಂತ್ಯಕ್ಕೆ ಅನಿಲ ಪೂರೈಕೆಯಾಗಲಿದೆ.ಸುಮಾರು 1,500 ಮನೆಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿವೆ.

ನಗರದಲ್ಲಿರುವ ಅನೇಕ ಮನೆಗಳು ಮುಂದಿನ ದಿನಗಳಲ್ಲಿ ಕೊಳವೆ ಮೂಲಕ ಅನಿಲ ಪಡೆಯುವ ಸಂಪರ್ಕ ಪಡೆದುಕೊಳ್ಳಲಿವೆ. 2017ರ ವೇಳೆಗೆ ಭಾರತೀಯ ಅನಿಲ ಪ್ರಾಧಿಕಾರ ಬೆಂಗಳೂರು ನಗರದ ಸುಮಾರು 2 ಲಕ್ಷ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ಹೊಂದಿದೆ. ಹೆಚ್ ಎಸ್ ಆರ್ ಲೇ ಔಟ್, ಬೆಳ್ಳಂದೂರು, ಹೆಚ್ ಎಎಲ್, ಸಂಜಯ್ ನಗರ, ಡಾಲರ್ಸ್ ಕಾಲೊನಿ, ಜಾಲಹಳ್ಳಿ, ಜಯನಗರ ಮತ್ತು ಜೆಪಿ ನಗರ ಈ ಪ್ರದೇಶಗಳಿಗೆ ಅನಿಲ ಕೊಳವೆ ಸಂಪರ್ಕ ಸೌಲಭ್ಯ ಸಿಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com