ಬೆಂಗಳೂರು: ಕಳೆದ ವರ್ಷದಿಂದ ಖಾಲಿ ಇದ್ದ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಹುದ್ದೆಗೆ ಹೈಕೋರ್ಟ್ ನ ಧಾರವಾಡ ಪೀಠದಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿರುವ ಎಚ್ ನಂಜುಂಡಸ್ವಾಮಿ ಅವರನ್ನು ನೇಮಕಗೊಳಿಸಲಾಗಿದೆ.
ಅದಲ್ಲದೇ, ಐವರು ನ್ಯಾಯಾಧೀಶರನ್ನು ಲೋಕಾಯುಕ್ತದ ಹೆಚ್ಚುವರಿ ರಿಜಿಸ್ಟ್ರಾರ್(ವಿಚಾರಣೆಗಳು)ಹುದ್ದೆಗೆ ಹೈಕೋರ್ಟ್ ಸಮಿತಿ ನೇಮಿಸಿದೆ.
2015ರ ಆಗಸ್ಟ್ ತಿಂಗಳಿನಿಂದ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಹುದ್ದೆ ಖಾಲಿ ಇತ್ತು. ನೂತನ ರಿಜಿಸ್ಟ್ರಾರ್ ಆಗಿ ಎಚ್ ನಂಜುಂಡಸ್ವಾಮಿ ಅವರು ಮೇ 30ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.