
ಬೆಂಗಳೂರು: 2016ರ ವಿಶ್ವ ವಿಖ್ಯಾತ ದಸರಾ ಉತ್ಸವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧ ದಲ್ಲಿ ಸಭೆ ನಡೆಯಿತು.
ಸಭೆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 1 ರಂದು ಬೆಳಗ್ಗೆ 11.40ಕ್ಕೆ ದಸರಾ ಉದ್ಘಾಟನೆ ಯಾಗಲಿದೆ. ಪ್ರತಿ ಭಾರಿಯಂತೆ ಈ ಬಾರಿ ಗಣ್ಯರಿಂದ ದಸರಾ ಉದ್ಘಾಟನೆ ನಡೆಯಲಿದೆ.
ಸಚಿನ್ ತೆಂಡೂಲ್ಕರ್, ಚನ್ನವೀರ ಕಣವಿ, ಎಸ್,ಎಲ್ ಭೈರಪ್ಪ, ನಿಸಾರ್ ಅಹಮದ್ ಹೆಸರು ಕೇಳಿ ಬಂದಿದ್ದು ಆಗಸ್ಟ್ 9 ರಂದು ನಡೆಯುವ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಭಾರಿ ಸರಳವೂ ಅಲ್ಲದ, ಅದ್ಧೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ನಡೆಸಲಾಗುವುದು. ಅಕ್ಟೋಬರ್ 11 ರಂದು ವಿಜಯ ದಶಮಿ ನಡೆಯಲಿದ್ದು, ಅಂದೇ ಜಂಬೂಸವಾರಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದ್ದಾರೆ.
ಕಳೆದ ಬಾರಿ ಭೀಕರ ಬರಗಾಲ ಇದ್ದ ಕಾರಣ ಸರಳವಾಗಿ ದಸರ ಆಚರಿಸಲಾಯಿತು. ಈ ಬಾರಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹಲವೆಡೆ ಉತ್ತಮ ಮಳೆಯಾಗಿದೆ. ಆದರೂ ಅದ್ದೂರಿಯಲ್ಲದ ಸರಳವೂ ಅಲ್ಲದ ದಸರಾ ಆಚರಿಸಲಾಗುವುದು ಎಂದು ಸಿಎಂ ಹೇಳಿದರು.
Advertisement