ಮಳೆ ಕೊರತೆ, ಹಣ ಪಾವತಿ ಬಾಕಿ ಕಬ್ಬು ಬೆಳೆ ಮೇಲೆ ಹೊಡೆತ; ಭತ್ತದತ್ತ ಹೊರಳಿರುವ ರೈತರು

ಕಡಿಮೆ ಮಳೆ ಮತ್ತು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಪಾವತಿ ಮಾಡದಿರುವುದು ಕಾವೇರಿ ನದಿ ತೀರದ ಬಹುತೇಕ ರೈತರು...
ಕೆಆರ್ ಎಸ್ ಮತ್ತು ಕಬಿನಿಯಿಂದ ನೀರು ಬಿಡುಗಡೆ ಮಾಡುತ್ತಿದ್ದಂತೆ ನಂಜನಗೂಡಿನ ರೈತರು ಭತ್ತದ ನಾಟಿ ಮಾಡುವಲ್ಲಿ ನಿರತರಾಗಿರುವುದು.
ಕೆಆರ್ ಎಸ್ ಮತ್ತು ಕಬಿನಿಯಿಂದ ನೀರು ಬಿಡುಗಡೆ ಮಾಡುತ್ತಿದ್ದಂತೆ ನಂಜನಗೂಡಿನ ರೈತರು ಭತ್ತದ ನಾಟಿ ಮಾಡುವಲ್ಲಿ ನಿರತರಾಗಿರುವುದು.
ಮೈಸೂರು: ಕಡಿಮೆ ಮಳೆ ಮತ್ತು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಪಾವತಿ ಮಾಡದಿರುವುದು ಕಾವೇರಿ ನದಿ ತೀರದ ಬಹುತೇಕ ರೈತರು ಕಬ್ಬು ಬೆಳೆಯನ್ನು ಬಿಟ್ಟುಬಿಡುವ ಪರಿಸ್ಥಿತಿ ಉಂಟಾಗಿದೆ.
ಉತ್ತಮ ಮಳೆ ಬೀಳುವ ಲಕ್ಷಣ ಗೋಚರಿಸದರಿಂದ ಕಾವೇರಿ ಜಲಾನಯನದಲ್ಲಿ ಕೂಡ ನೀರಿನ ಮಟ್ಟ ಏರಿಕೆಯಾಗದಿರುವುದರಿಂದ ರೈತರಿಗೆ ನೀರಿನ ಕೊರತೆಯುಂಟಾಗುತ್ತಿದೆ. ಇದರ ಜೊತೆಗೆ ಸಕ್ಕರೆ ಕಾರ್ಖಾನೆಗಳು ಕೂಡ ರೈತರಿಗೆ ಅವರು ನೀಡಿದ ಕಬ್ಬಿಗೆ ನಿಗದಿತ ಕಾಲಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಇನ್ನೊಂದೆಡೆ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ನಿಗದಿತ ಬೆಲೆ ನಿಗದಿಪಡಿಸುವಲ್ಲಿ ವಿಫಲವಾಗಿದೆ. ಈ ಎಲ್ಲಾ ಪರಿಸ್ಥಿತಿ ಒಟ್ಟಿಗೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 
ನಮ್ಮ ರಾಜ್ಯದಲ್ಲಿ 67 ಸಕ್ಕರೆ ಕಾರ್ಖಾನೆಗಳಿದ್ದು ಅವಕ್ಕೆ 5 ಕೋಟಿ ಟನ್ ಸಕ್ಕರೆಯ ಅಗತ್ಯವಿದೆ. ಮೈಸೂರು, ಮಂಡ್ಯ ಮತ್ತು ಚಾಮರಾಜನಗರಗಳಲ್ಲೇ 7 ಸಕ್ಕರೆ ಕಾರ್ಖಾನೆಗಳಿವೆ. 2013-14ರಲ್ಲಿ ಕಬ್ಬಿನ ಉತ್ಪಾದನೆ ನಮ್ಮ ರಾಜ್ಯದಲ್ಲಿ 4.40 ಕೋಟಿ ಟನ್ ಗಳಾಗಿದ್ದು, 2014-15ರಲ್ಲಿ 3.60 ಕೋಟಿ ಟನ್ ಗಳಷ್ಟಾಗಿತ್ತು. ಈ ವರ್ಷ ಅದು 3 ಕೋಟಿ ಟನ್ ಗಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಕಬ್ಬು ಹೆಚ್ಚು ಬೆಳೆಯುವ ಬೆಳಗಾವಿ ಮತ್ತು ಬಾಗಲಕೋಟೆಗಳಲ್ಲಿ ಕೂಡ ಇತ್ತೀಚೆಗೆ ಉತ್ಪಾದನೆ ಕಡಿಮೆಯಾಗುತ್ತಿದೆ.
ಕೆಆರ್ ಎಸ್ ಮತ್ತು ಕಬಿನಿ ಅಚ್ಚುಕಟ್ಟಿನಲ್ಲಿ ಸಭೆ ನಡೆಸಿದ ನೀರಾವರಿ ಸಲಹಾ ಸಮಿತಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ನಿರ್ಧರಿಸಿತ್ತು. ನೀರಿನ ಕೊರತೆಯಿರುವುದರಿಂದ ರೈತರಲ್ಲಿ ಅರೆ ಒಣ ಬೆಳೆಗಳನ್ನು ಬೆಳೆಯುವಂತೆ ಸೂಚಿಸಿತ್ತು.
ಇದು, ಕಳೆದ 10 ದಿನಗಳಿಂದ ಕಬ್ಬು ಬಿಟ್ಟು ಭತ್ತ ಬೆಳೆಯಲು ಆರಂಭಿಸಿದ್ದ ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.ಕೆಲ ಖಾಸಗಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬು ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದು, ಬೆಳೆ ಸಾಲವನ್ನು ಒದಗಿಸುತ್ತಿದ್ದರೂ ಕಾರ್ಖಾನೆಗಳಿಂದ ಈಗಾಗಲೇ ಕಹಿ ಅನುಭವ ಪಡೆದಿರುವ ರೈತರು ಕಬ್ಬು ಬೆಳೆಯಲು ಮನಸ್ಸು ಮಾಡುತ್ತಿಲ್ಲ.
ನಮ್ಮ ಬೆಳೆಯಲು ರಕ್ಷಿಸಿಕೊಳ್ಳಲು ನೀರು ಸಾಕಷ್ಟು ಇಲ್ಲ. ಕಬ್ಬಿನ ಉತ್ಪಾದನೆಯಲ್ಲಿ ಕುಸಿತ ಎರಡು ವರ್ಷಗಳಿಂದ ಮಂಡ್ಯದಲ್ಲಿ ಮುಚ್ಚಲ್ಪಟ್ಟಿರುವ ಮೈಷುಗರ್ ಕಾರ್ಖಾನೆ ಮತ್ತೆ ತೆರೆಯಲು ವಿಳಂಬವಾಗುವ ಸಾಧ್ಯತೆಯಿದೆ.
 ಮಂಡ್ಯದ ಗೋಪಾಲ್ ಎಂಬುವವರು ಹೀಗೆ ಹೇಳುತ್ತಾರೆ: ಸಕ್ಕರೆ ಉತ್ಪಾದನೆ ಕುಸಿದಿರುವುದರಿಂದ ಮುಂದಿನ ದಿನಗಳಲ್ಲಿ ಸಕ್ಕರೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಕೆಆರ್ ಎಸ್ ನಲ್ಲಿ ಸಾಕಷ್ಟು ನೀರು ಇಲ್ಲ, ಹಾಗಾಗಿ ಮಂಡ್ಯ, ಮೈಸೂರು ತೀರದ ರೈತರು ಭತ್ತದ ಬೆಳೆ ಬೆಳೆಯಲು ನಿರ್ಧರಿಸಿದ್ದಾರೆ. 
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಕೂಡ ಕಬ್ಬಿನ ಉತ್ಪಾದನೆ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ರೈತರ ಬಾಕಿ ಹಣ ಪಾವತಿ ಮಾಡಬೇಕೆಂದು ಹೋರಾಟ, ಪ್ರತಿಭಟನೆ ನಡೆಸುತ್ತಿರುವ ರೈತರು ಈ ವರ್ಷ ಕಬ್ಬು ಬೆಳೆಯದಿರಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ಶಾಂತಕುಮಾರ್.
 ಕಬ್ಬು ಬೆಳೆಯಲು ಖರ್ಚು ಹೆಚ್ಚಾಗುವುದರಿಂದ ರೈತರು ಅದನ್ನು ಬೆಳೆಯದಂತೆ ನಾವು ರೈತರಿಗೆ ತಿಳುವಳಿಕೆ ನೀಡುತ್ತಿದ್ದೇವೆ. ಅನೇಕ ಕಾರಣಗಳಿಂದ ರೈತರಿಗೆ ನಷ್ಟವಾಗುತ್ತಿದೆ. ರೈತರು ನಮ್ಮ ಮಾತನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಹೇಳುತ್ತಾರೆ.
ಕಬ್ಬು ಬೆಳೆಗಾರರಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಮತ್ತು ರೈತರ ಬಾಕಿ ಉಳಿದಿರುವ 470 ಕೋಟಿ ರೂಪಾಯಿ ನೀಡುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಕಬ್ಬು ಬೆಳೆಗಾರ ಶ್ರೀನಾಥ್, ಸರ್ಕಾರ ರೈತರ ಬಾಕಿ ಹಣವನ್ನು ನೀಡದಿರುವುದರಿಂದ ರೈತರು ತಮ್ಮದೇ ಬೆಲ್ಲ ಉತ್ಪಾದನೆ ಘಟಕವನ್ನು ಸ್ಥಾಪಿಸಲಿದ್ದಾರೆ. ಇದರಿಂದ ಒಳ್ಳೆ ಗುಣಮಟ್ಟದ ಬೆಲ್ಲ ತಯಾರಿಸಬಹುದು. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಬೇಡಿಕೆಯುಂಟಾಗಬಹುದು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com