
ಬೆಂಗಳೂರು: ಕಾಡುಗೋಡಿಯ ಅಪಾರ್ಟ್ಮೆಂಟ್ನಲ್ಲಿ ಟೆಕ್ಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಸೋಹನ್ಕುಮಾರ್ ಹಲ್ದಾರ್(35)ಮೃತ ಟೆಕ್ಕಿ.
ಕಾಡುಗುಡಿಯ ಪ್ರೆಸ್ಟೀಜ್ ಶಾಂತಿನಿಕೇತನ ಅಪಾರ್ಟ್ ಮೆಂಟ್ನ ಫ್ಲಾಟ್ನಲ್ಲಿ ನೆಲೆಸಿದ್ದ. ಫ್ಲ್ಯಾಟ್ನಲ್ಲಿ 4 ಕೊಠಡಿಗಳಿದ್ದು, ಒಂದರಲ್ಲಿ ಸೋಹನ್ ನೆಲೆಸಿದ್ದು, ಉಳಿದ ಮೂರರಲ್ಲಿ ಸ್ನೇಹಿತರು ವಾಸವಾಗಿದ್ದರು. ಕಳೆದ 2 ದಿನಗಳಿಂದ ಸೋಹನ್ ಕೆಲಸಕ್ಕೆ ಹೋಗಿರಲಿಲ್ಲ. ಮೊಬೈಲ್ಗೆ ಕರೆ ಮಾಡಿದರೆ, ಸ್ವಿಚ್ ಆಫ್ ಎಂದು ಬರುತ್ತಿತ್ತು. ಇದರಿಂದ ಕಂಪನಿ ನೌಕರರು ಮನೆಗೆ ಬಂದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
2 ದಿನಗಳ ಹಿಂದೆಯೇ ಮೃತಪಟ್ಟಿದ್ದು, ಶವ ವಾಸನೆ ಬರುತ್ತಿತ್ತು. ದೇಹದ ಮೇಲೆ ಗಾಯದ ಗುರುತುಗಳಿಲ್ಲ. ಕಾುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯೊ ಅಥವಾ ಕಾಯಿಲೆಯಿಂದ ಮೃತಪಟ್ಟಿದ್ದಾರೋ ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಳಿಕ ತಿಳಿಯಲಿದೆ. ಸೋಹನ್ ಮೃತ ಪಟ್ಟಿರುವ ಸ್ಥಳದಿಂದ ಆತನ ಫೋನ್ ಮತ್ತು ಪರ್ಸ್ ನಾಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement