ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ನ 6 ಮಂದಿಗೆ ಜೀವಾವಧಿ ಶಿಕ್ಷೆ

ಸರಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟೋರಿಯಸ್ ಇರಾನಿ ಗ್ಯಾಂಗ್‌ನ ಆರು ಮಂದಿಗೆ ಬೆಳಗಾವಿಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ...
ಇರಾನಿ ಗ್ಯಾಂಗ್ ಆರೋಪಿಗಳು
ಇರಾನಿ ಗ್ಯಾಂಗ್ ಆರೋಪಿಗಳು

ಬೆಳಗಾವಿ: ಸರಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟೋರಿಯಸ್ ಇರಾನಿ ಗ್ಯಾಂಗ್‌ನ ಆರು ಮಂದಿಗೆ ಬೆಳಗಾವಿಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಗಳಾದ ಮಹಮದ್ ಇರಾನಿ ಶಾರುಕ್ ಶೇಖ್‌, ಅಬ್ಬಾಸ್ ಇರಾನಿ, ಹೈದರ್ ಇರಾನಿ, ರಫಿಕ್‌ ಶೇಖ್ ಮತ್ತು ಸಲೀಂ ಶೇಖ್‌ ಅವರಿಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ ನಾಯಕ  ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದರು.

ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಐ.ಮಕಾಂದರ ವಾದ ಮಂಡಿಸಿದ್ದರು. ಆರೋಪಿಗಳು ಬೆಳಗಾವಿ ನಗರದಲ್ಲಿ 2015ರಲ್ಲಿ 33 ಕಡೆ ಸರಗಳವು ಮಾಡಿದ್ದರು.  ನೀರು ಇಲ್ಲವೇ ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ ನಡೆಸುತ್ತಿದ್ದರು.

ಮಹಾರಾಷ್ಟ್ರ ಮೂಲದ ಈ ಗ್ಯಾಂಗ್ ಬೈಕ್ ಗಳನ್ನು ಕದ್ದು ಅದರ ನಂಬರ್ ಪ್ಲೇಟ್ ಬದಲಿಸಿ ಸರಗಳ್ಳತನ ಮಾಡುತ್ತಿದ್ದರು.  ಕದ್ದ ಸರಗಳನ್ನು ಪುಣೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಸರ್ವೀಸ್ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ಕಮಿಷನರ್ ಎಸ್ ರವಿ, ಆರೋಪಿಗಳನ್ನು ಸೆರೆ ಹಿಡಿಯಲು ವಿಶೇಷ ತಂಡ ರಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com