ವರ್ಷ ಕಳೆದರೂ ಹಂತಕನ ಬಗ್ಗೆ ಸಿಐಡಿ ಗೆ ಇನ್ನೂ ಸಿಕ್ಕಿಲ್ಲ ಒಂದು ಸಣ್ಣ ಸುಳಿವು

ಶೋಧಕ ಡಾ.ಎಂ.ಎಂ ಕಲಬುರಗಿ ಹತ್ಯೆಯಾಗಿ ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಇದುವರೆಗೂ ಸಿಐಡಿ ಅಧಿಕಾರಿಗಳಿಗೆ ಹಂತಕನ ಬಗ್ಗೆ ಒಂದು ಸಣ್ಣ ..
ಎಂ.ಎಂ. ಕಲಬುರಗಿ
ಎಂ.ಎಂ. ಕಲಬುರಗಿ
Updated on

ಹುಬ್ಬಳ್ಳಿ/ ಧಾರವಾಡ: ಸಂಶೋಧಕ ಡಾ.ಎಂ.ಎಂ ಕಲಬುರಗಿ ಹತ್ಯೆಯಾಗಿ ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಇದುವರೆಗೂ ಸಿಐಡಿ ಅಧಿಕಾರಿಗಳಿಗೆ ಹಂತಕನ ಬಗ್ಗೆ ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.

ಮಹಾರಾಷ್ಟ್ರದ ಇಬ್ಬರು ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಹತ್ಯೆಯಂತೆ ಕಲಬುರಗಿ ಅವರ ಕೊಲೆ ನಡೆದಿದೆ ಎಂದು ವಿಚಾರವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಆಗಸ್ಟ್ 30 ರಂದು ಕಲ್ಯಾಣ ನಗರದ ತಮ್ಮ ನಿವಾಸದಲ್ಲಿ ಕಲಬುರಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ನಡೆದ ಇಬ್ಬರು ವಿಚಾರವಾದಿಗಳ ಹತ್ಯೆ ಸಂಬಂಧಿತ ಪ್ರಕರಣಗಳಲ್ಲಿ ಇದುವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಹಾಗೆಯೇ ಕಲಬುರಗಿ ಅವರ ಹಂತಕರ ಒಂದು ಸಣ್ಣ ಸುಳಿವು ಕೀಡ ಸಿಕ್ಕಿಲ್ಲ.

ಕಲಬುರಗಿ ಹತ್ಯೆಯಲ್ಲಿ ಬಲ ಪಂಥೀಯ ಸಂಘಟನೆಗಳ ಕೈವಾಡ ವಿದೆ ಎಂದು ಸಿಐಡಿ ಅಧಿಕಾರಿಗಳು ಅನುಮಾನ ವ್ಯಕ್ತ ಪಡಿಸಿದ್ದಾರೆ. ವಯಕ್ತಿಕ ಹಾಗೂ ಆಸ್ತಿ ವಿವಾದ ಸಂಬಂಧ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಸಿಐಡಿ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ದಾಬೋಲ್ಕರ್ ಹತ್ಯೆ ಪ್ರಕರಣಧಲ್ಲಿ ಮಹಾರಾಷ್ಟ್ರ ಪೊಲೀಸರು ಮಾಡಿದ್ದನ್ನೇ ಸಿಐಡಿ ಅಧಿಕಾರಿಗಳು ಯಥವತ್ಕಾಗಿ ಅನುಸರಿಸುತ್ತಿದ್ದಾರೆ ಎಂದು ಕಲಬುರಗಿ ಕುಟುಂಬದಗ ಸದಸ್ಯರು ಆರೋಪಿಸಿದ್ದಾರೆ.

ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಕಲಬುರಗಿ ಹತ್ಯೆಗಳು ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಪಡೆದಲು. ಆದರೆ ಇದುವರೆಗೂ ಒಬ್ಬನೇ ಒಬ್ಬ ಆರೋಪಿ ಸುಳಿವು ಸಿಗದಿರುವುದು ದುರಾದೃಷ್ಟಕರ.

ಕಲಬುರಗಿ ಯಾವತ್ತೂ ವಿಚಾರವಾದಿಯಾಗಿರಲಿಲ್ಲ, ಅವರು ಮೌಢ್ಯವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು ಎಂದು ಅವರ ಸಹಚರರು ಹೇಳಿದ್ದಾರೆ.

ಸರ್ಕಾರ ಪ್ರಕರಣದ ತನಿಖೆಯನ್ನು ಹಿಂದಕ್ಕೆ ಪಡೆದಿರಬೇಕು ಎಂದು ಕಲಬುರಗಿ ಕುಟುಂಬಸ್ಥರಲ್ಲಿ ಅನುಮಾನ ಮೂಡಿದ್ದು, ಈ ಸಂಬಂಧ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಇನ್ನೂ ಸರ್ಕಾರ ಪ್ರಕರಣ ಸಂಬಂಧ ಗಂಭೀರ ತನಿಖೆ ನಡೆಸಿಲ್ಲ. ಸುಮ್ಮನೆ ಪ್ರಕರಣದಲ್ಲಿ ಹಲವು ಸಂಘಟನೆಗಳ ಹೆಸರನ್ನು ಸುಮ್ಮನೆ ಎಳೆದು ತರುತ್ತಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com