ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಅವರಿಗೆ ಎಸಿಬಿ ಅಧಿಕಾರಿಗಳು ಬುಧವಾರ ನೋಟಿಸ್ ಜಾರಿ ಮಾಡಿದ್ದಾರೆ.
ಅರವಿಂದ್ ಜಾದವ್ ಅವರ ತಾಯಿ ತಾರಾಭಾಯ್ ಅವರಿಗೆ ಸೇರಿದ ಭೂ ದಾಖಲೆಗಳ ವಿವರ ನೀಡುವಂತೆ ಎಸಿಬಿ ಅಧಿಕಾರಿಗಳು ಜಿಲ್ಲಾಧಿಕಾರಿ ಶಂಕರ್ ಅವರಿಗೆ ನೋಟಿಸ್ ನೀಡಿದ್ದಾರೆ.
ಜಾಧವ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ತಾಯಿ ತಾರಾಭಾಯ್ ಹೆಸರಲ್ಲಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ನಿನ್ನೆ ಆರ್ ಟಿ ಐ ಕಾರ್ಯಕರ್ತ ಎಸ್.ಭಾಸ್ಕರನ್ ಅವರು ಎಸಿಬಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸಿಬಿ ಇಂದು ಡಿಸಿಗೆ ನೋಟಿಸ್ ಜಾರಿ ಮಾಡಿದೆ.
ಇನ್ನು ತಮ್ಮ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿರುವ ಜಾಧವ್ ಅವರು,
ಭೂಮಿ ಖರೀದಿಗೆ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆಯಾಗಲಿ, ಅಕ್ರಮವಾಗಲಿ ನಡೆದಿಲ್ಲ. ನನ್ನ ತಾಯಿ ಊರಿನಲ್ಲಿದ್ದ ತಮ್ಮ ಜಮೀನು ಮಾರಿ ಬೆಂಗಳೂರಿನಲ್ಲಿ ಜಮೀನು ಖರೀದಿಸಿದ್ದರು. ಆ ಭೂಮಿ ಖರೀದಿ ವೇಳೆ ಸರ್ಕಾರಿ ಭೂಮಿ ಆಗಿರಲಿಲ್ಲ. ಅಲ್ಲದೇ ನನ್ನ ತಾಯಿ ಭೂಮಿ ಖರೀದಿಸುವ ವೇಳೆ ನಾನು ಕೇಂದ್ರದ ಸೇವೆಯಲ್ಲಿದ್ದೆ ಎಂದಿದ್ದಾರೆ.