ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಚಕ್ಕುಲಿ, ನಿಪ್ಪಟ್ಟು
ಬೆಂಗಳೂರು: ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರ ಇನ್ನು ಮುಂದೆ ನಿಪ್ಪಟ್ಟು ಮತ್ತು ಚಕ್ಕುಲಿ ವಿತರಣೆ ಮಾಡಲು ಮುಂದಾಗಿದೆ.
ಮಧ್ಯಾಹ್ನದ ಬಿಸಿಯೂಟ ಕೇವಲ ಮಕ್ಕಳ ಹಾಜರಾತಿಯನ್ನು ಆಕರ್ಷಿಸುವ ಯೋಜನೆಯಾಗಬಾರದು, ಇದರಿಂದ ಮಕ್ಕಳಿಗೆ ಪೌಷ್ಠಿಕಾಂಶ ದೊರೆಯಲು ಸರ್ಕಾರ ಆಲೋಚನೆ ಮಾಡುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರ ತಂಡವೊಂದು ವರದಿನೀಡಿತ್ತು. ಈ ವರದಿಯಾನುಸಾರ ಇದೀಗ ರಾಜ್ಯಸರ್ಕಾರ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನಿಪ್ಪಟ್ಟು , ಚಕ್ಕುಲಿ ನೀಡಲು ನಿರ್ಧರಿಸಿದೆ.
ರಾಜ್ಯಾದ್ಯಂತ ಸದ್ಯಕ್ಕೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅಕ್ಷಯ ಪಾತ್ರೆ ಫೌಂಡೇಶನ್ (ಇಸ್ಕಾನ್) ವಹಿಸಿಕೊಂಡಿದೆ. ಇದೀಗ ಚಕ್ಕುಲಿ ಮತ್ತು ನಿಪ್ಪಟ್ಟು ಇವರಿಗೆ ವಿತರಣೆ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಪ್ರತಿದಿನ ಒಂದು ಮಗುವಿಗೆ 100 ಗ್ರಾಂ ಪ್ರಮಾಣದ ಅನ್ನ ನೀಡುತ್ತಿದೆ. ಆದರೆ ಮಕ್ಕಳು ಕೇವಲ 80 ಗ್ರಾಂ ಮಾತ್ರ ಅನ್ನ ಸೇವಿಸುತ್ತವೆ. ಉಳಿದ 20 ಗ್ರಾಂ ಅಕ್ಕಿಯ ಬಳಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಳಿದ 20 ಗ್ರಾಂ ಅಕ್ಕಿಯಲ್ಲಿ ಚಕ್ಕುಲಿ, ನಿಪ್ಪಟ್ಟು ತಯಾರಿಸಲು ಇಸ್ಕಾನ್ ಫೌಂಡೇಶನ್ ಸಿದ್ಧತೆ ನಡೆಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ