ರಾಜಕಾಲುವೆ ಒತ್ತುವರಿ ತೆರವು: ಸಂತ್ರಸ್ತರಿಗೆ ಬಿಡಿಎ ಫ್ಲ್ಯಾಟ್ ಅಥವಾ ಸೈಟ್?

ಸಿಲಿಕಾನ್ ಸಿಟಿಯ ವಿವಿಧ ಭಾಗಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಮುಂದುವರೆದಿದ್ದು, ತೆರವಿನಿಂದ ಮನೆ ಕಳೆದುಕೊಂಡು ಬೀದಿಗೆ....
ಬಿಡಿಎ ಫ್ಲ್ಯಾಟ್ (ಸಾಂದರ್ಭಿಕ ಚಿತ್ರ)
ಬಿಡಿಎ ಫ್ಲ್ಯಾಟ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಸಿಲಿಕಾನ್ ಸಿಟಿಯ ವಿವಿಧ ಭಾಗಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಮುಂದುವರೆದಿದ್ದು, ತೆರವಿನಿಂದ ಮನೆ ಕಳೆದುಕೊಂಡು ಬೀದಿಗೆ ಬರುವ ನಿರ್ಗತಿಕರಿಗೆ ಬಿಡಿಎ ವತಿಯಿಂದ ಫ್ಲ್ಯಾಟ್ ಅಥವಾ ನಿವೇಶನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ ಹೇಗೆ ಪರಿಹಾರ ಒದಗಿಸುವುದು ಎಂಬುದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನಗರದ ಸಚಿವರು, ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಮೇಯರ್ ಮುಖ್ಯಮಂತ್ರಿ ಮನವಿ ಮಾಡಿದರು.
ರಾಜಕಾಲುವೆ ಒತ್ತುವರಿ ತೆರವಿನಿಂದ ಮನೆ ಮಠ ಕಳೆದುಕೊಳ್ಳುವ ಬಡಜನರನ್ನು ಗುರುತಿಸಲು ಶೀಘ್ರ ಸಮೀಕ್ಷೆ ನಡೆಸಿ ಅಂತಹವರಿಗೆ ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಫ್ಲ್ಯಾಟ್ ಇಲ್ಲವೇ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಭೆಯ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ 38 ಸ್ಥಳಗಳನ್ನು ಗುರುತಿಸಿದ್ದು, ಆ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಿ. ಮಳೆ ಬಂದರೆ ಈ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಹೇಳಿದರು.
ಇನ್ನುಳಿದ ಒತ್ತುವರಿಯನ್ನು ಆದ್ಯತೆ ಮೇಲೆ ತೆರವು ಮಾಡುವಂತೆ ಸೂಚಿಸಿದ್ದು, ತೆರವಿನ ವೇಳೆ ಮನೆ, ನಿವೇಶನ ಕಳೆದುಕೊಳ್ಳುವವರಿಗೆ ಪರ್ಯಾಯ ರಕ್ಷಣೆ ಮಾಡುವಂತೆಯೂ ಸೂಚಿಸಿದ್ದಾರೆ ಎಂದರು.
ಈ ವೇಳೆ ಮಾತನಾಡಿದ ಮೇಯರ್ ಮಂಜುನಾಥರೆಡ್ಡಿ ಅವರು, ರಾಜಕಾಲುವೆ ಒತ್ತುವರಿಯಿಂದ ತೆರವಿನಿಂದ ಮನೆ ಕಳೆದುಕೊಂಡಿರುವವರಿಗೆ ಬಿಡಿಎನಿಂದ ಫ್ಲ್ಯಾಟ್ ವಿತರಿಸುವ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com