ದಸರಾ ಆನೆಗಳಿಗೆ ಮೈಸೂರು ಅರಮನೆಯಲ್ಲಿ ಸಾಂಪ್ರಾದಾಯಿಕ ಸ್ವಾಗತ

ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಜಯಮಾರ್ತಾಂಡ ಪ್ರವೇಶ ದ್ವಾರದ ಮೂಲಕ ಅರಮನೆಗೆ ಬಂದಿಳಿದಿವೆ....
ದಸರಾ ಆನೆಗಳಿಗೆ ಸ್ವಾಗತ
ದಸರಾ ಆನೆಗಳಿಗೆ ಸ್ವಾಗತ

ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಜಯಮಾರ್ತಾಂಡ ಪ್ರವೇಶ ದ್ವಾರದ ಮೂಲಕ ಅರಮನೆಗೆ ಬಂದಿಳಿದಿವೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಸಂಸದ ಪ್ರತಾಪ್ ಸಿಂಹ ಹಾಗೂ ಹಲವು ಜನಪ್ರತಿನಿಧಿಗಳು ದಸರಾ ಆನೆಗಳನ್ನು ಸ್ವಾಗತಿಸಿದರು.

ಅರ್ಜುನ, ಬಲರಾಮ, ಅಭಿಮನ್ಯು, ವಿಜಯ, ಕಾವೇರಿ,ಗಜೇಂದ್ರ ಆನೆಗಳನ್ನು ಮಕರ ಲಗ್ನದಲ್ಲಿ ಸ್ವಾಗತಿಸಿಲಾಯಿತು. ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶ್ರೀಧರ್ ದಿಕ್ಷೀತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.

14.5 ಕೋಟಿ ರೂ. ವೆಚ್ಚದಲ್ಲಿ ಈ ಬಾರಿ ದಸರಾ ನಡೆಸಲಾಗುವುದು. ಸರ್ಕಾರ ಶೀಘ್ರವೇ ದಸರಾಗಾಗಿ ಹಣ ಬಿಡುಗಡೆ ಮಾಡುತ್ತದೆ ಎಂದು ಸಹಕಾರ ಸಚಿವ ಎಚ್.ಸಿ ಮಹಾದೇವ ಪ್ರಸಾದ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com