ಉಡುಪಿ: ದೇಶದಲ್ಲಿ ನೋಟು ನಿಷೇಧದ ಬಳಿಕ ದೇಶದಲ್ಲಿ ಹಲವು ಮಹತ್ತರ ಘಟನೆಗಳು ನಡೆಯುತ್ತಿದ್ದು, ಇದೀಗ ಭಕ್ತರಿಂದ ಕಾಣಿಕೆ ಸಂಗ್ರಹಕ್ಕೆ ದೇವಸ್ಥಾನ ಹಾಗೂ ಮಠ ಮಾನ್ಯಗಳು ಇದೀಗ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಿದೆ.
ಇತ್ತೀಚೆಗಷ್ಟೇ ಶಬರಿಮಲೆಯಲ್ಲಿ ಇ-ಹುಂಡಿ ಸೇವೆಗೆ ಚಾಲನೆ ನೀಡಲಾಯಿತು. ಭಕ್ತರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಸ್ವೈಪ್ ಮಾಡುವ ಮೂಲಕ ದೇವಸ್ಥಾನಕ್ಕೆ ಕಾಣಿಕೆ ಅರ್ಪಿಸಬಹುದಾಗಿತ್ತು.
ಇದೇ ರೀತಿಯ ವ್ಯವಸ್ಥೆಯನ್ನು ಇದೀಗ ಅಷ್ಠ ಮಠಗಳಲ್ಲಿ ಒಂದಾದ ಉಡುಪಿಯ ಪಾಲಿಮರು ಮಠ ಸ್ವೈಪಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಣ ರಹಿತ ವಹಿವಾಟು ನಡೆಸುವ ಸಲುವಾಗಿ ಭಕ್ತರು ಮಠಕ್ಕೆ ಸ್ವೈಪ್ ಮಿಷನ್ ಅನ್ನು ದಾನ ನೀಡಿದ್ದಾರೆ.
ಶ್ರೀ ಪಾಲಿಮರ್ ಮಠದ ಶ್ರೀಗಳಾದ ವಿದ್ಯಾದೇಶ ತೀರ್ಥ ಸ್ವಾಮೀಜಿಗಳು ನೋಟು ರದ್ದತಿಯಿಂದಾಗಿ ಹಣ ವರ್ಗಾವಣೆಗಾಗಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಭಕ್ತಾಧಿಗಳು ಸ್ವೈಪ್ ಮಾಡುವ ಮೂಲಕ ಮಠಕ್ಕೆ ಕಾಣಿಕೆ ನೀಡಬಹುದಾಗಿದೆ ಎಂದರು.
ಸಚಿವ ಪ್ರಮೋದ್ ಮದ್ವರಾಜ್ ಅವರು ತಮ್ಮ ಡೆಬಿಟ್ ಕಾರ್ಡ್ ಅನ್ನು ಸ್ವೈಪ್ ಮಾಡುವ ಮೂಲಕ ಮಠಕ್ಕೆ ಕಾಣಿಕೆ ನೀಡಿದ ಮೊದಲ ದಾನಿಯಾಗಿದ್ದಾರೆ.