ಬೆಂಗಳೂರು: ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯಿಂದ ಸಬ್ ಇನ್ಸ್ ಪೆಕ್ಟರ್ ಹುದ್ದೆವರೆಗಿನ ರಾಜ್ಯದ ಸುಮಾರು 11 ಸಾವಿರ ಪೊಲೀಸ್ ಸಿಬ್ಬಂದಿಗೆ ಏಕಕಾಲಕ್ಕೆ ಬಡ್ತಿ ನೀಡಲು ಸರ್ಕಾರ ನಿರ್ಧರಿಸಿದೆ.
ವರ್ಷಾರಂಭದ ವೇಳೆಗೆ ಕಾನ್ಸ್‌ಟೇಬಲ್‌ಗಳು ಹೆಡ್ ಕಾನ್ಸ್‌ಟೇಬಲ್‌ಗಳು ಹುದ್ದೆಗೆ, ಕಾನ್ಸ್‌ಟೇಬಲ್‌ಗಳು ಎಎಸ್‌ಐ ಹುದ್ದೆಗೆ ಹಾಗೂ ಎಎಸ್‌ಐಗಳು ಸಬ್ ಇನ್ಸ್‌ಪೆಕ್ಟರ್ ಸ್ಥಾನಕ್ಕೆ ಮುಂಬಡ್ತಿ ಹೊಂದಲಿದ್ದಾರೆ. ಆಯಾ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳೇ ನೇರವಾಗಿ ಬಡ್ತಿ ಆದೇಶಗಳನ್ನು ಹೊರಡಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಗೃಹ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 'ಸಕಾರಣ ಇಲ್ಲದೆ ಯಾವುದೇ ಬಡ್ತಿ ತಡೆಹಿಡಿಯಬಾರದು. ಅರ್ಹರಿರುವ ಎಲ್ಲ 11 ಸಾವಿರ ಕೆಳಹಂತದ ಪೊಲೀಸ್ ಸಿಬ್ಬಂದಿಗೆ ತಕ್ಷಣ ಮುಂಬಡ್ತಿ ಆದೇಶ ನೀಡಬೇಕು, ಎಂದು ಸಿಎಂ ಆದೇಶಿಸಿದರು.
26, 702 ಪೊಲೀಸ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ 5 ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುದು. ಜೊತೆಗೆ ಪೊಲೀಸ್ ಸಿಬ್ಬಂದಿಗೆ 4,200 ಮನೆಗಳನ್ನು ಈ ವರ್ಷದಲ್ಲಿ ನಿರ್ಮಿಸುವುದರ ಜೊತೆಗೆ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಪಬ್ಲಿಕ್ ಶಾಳೆ ನಿರ್ಮಾಣಕ್ಕೆ ಮತ್ತು ದಾವಣಗೆರೆ ಮತ್ತು ಮೈಸೂರಿನಲ್ಲಿರುವ ಪಬ್ಲಿಕ್ ಸ್ಕೂಲ್ ಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ 5 ಕೋಟಿ ರು ಬಿಡುಗಡೆ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.