ಈದ್ ಮಿಲಾದ್ ರಜೆ ಸೋಮವಾರ ಅಲ್ಲ ಮಂಗಳವಾರ

ರಾಜ್ಯ ಸರ್ಕಾರ ‘ಈದ್‌ ಮಿಲಾದ್’ ರಜೆಯನ್ನು ಸೋಮವಾರಕ್ಕೆ ಬದಲಾಗಿ ಮಂಗಳವಾರ, ಡಿಸೆಂಬರ್ 13ರಂದು ಸಾರ್ವತ್ರಿಕ ರಜೆ...
ವಿಧಾನಸೌಧ
ವಿಧಾನಸೌಧ
Updated on
ಬೆಂಗಳೂರು: ರಾಜ್ಯ ಸರ್ಕಾರ ‘ಈದ್‌ ಮಿಲಾದ್’ ರಜೆಯನ್ನು ಸೋಮವಾರಕ್ಕೆ ಬದಲಾಗಿ ಮಂಗಳವಾರ, ಡಿಸೆಂಬರ್ 13ರಂದು ಸಾರ್ವತ್ರಿಕ ರಜೆ ಘೋಷಿಸಿ ಶುಕ್ರವಾರ ಆದೇಶ ಹೊರಡಿಸಿದೆ. 
ಈ ಸಂಬಂಧ ರಾಜ್ಯ ಸರ್ಕಾರ ಇಂದು ಸುತ್ತೋಲೆ ಹೊರಡಿಸಿದ್ದು, ಈ ಮುಂಚೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಡಿಸೆಂಬರ್ 12ರಂದು ನೀಡಲಾಗಿದ್ದ ರಜೆಯನ್ನು ರದ್ದುಗೊಳಿಸಲಾಗಿದ್ದು, ಈಗ ಸೆಂಟ್ರಲ್ ಮೂನ್ ಕಮಿಟಿ ಅಭಿಪ್ರಾಯದಂತೆ ಡಿ. 13ರಂದು ರಜೆ ಘೋಷಿಸಲಾಗಿದೆ ಎಂದು ತಿಳಿಸಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ವಾರಂತ್ಯದ ಎರಡು ರಜೆಗಳ ಜೊತೆಗೆ ಸೋಮವಾರ ರಜೆಯನ್ನು ಕಳೆದುಕೊಂಡಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com