
ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಐಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕಳೆದ ವರ್ಷ ರಾಯಚೂರಿಗೆ ಐಐಟಿ ಕೈ ತಪ್ಪಿತ್ತು. ಹೀಗಾಗಿ ರಾಯಚೂರಿನಲ್ಲಿ ಐಐಟಿ ಬದಲು ಐಐಐಟಿ (ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ ಫಾರ್ಮೇಶನ್ ಟೆಕ್ನಾಲಜಿ ) ಸ್ಥಾಪನೆಗೆ ಅವಕಾಶ ನೀಡಿದೆ.
ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ನಂಜುಂಡಪ್ಪ ವರದಿ ಶಿಫಾರಸು ಮಾಡಿತ್ತು. ಆದರೆ ಕಳೆದ ವರ್ಷ ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಅನುಮತಿ ನೀಡಿತು. ಐಐಟಿ ಸ್ಥಾಪನೆ ಅವಕಾಶ ಕೈತಪ್ಪಿದ್ದಕ್ಕಾಗಿ ರಾಯಚೂರಿನಲ್ಲಿ ತೀವ್ರ ಅಸಮಾಧಾನ, ಪ್ರತಿಭಟನೆ, ಬಂದ್ ನಡೆಸಲಾಗಿತ್ತು.
ಕಳೆದ ವರ್ಷ ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಿದ್ದಕ್ಕಾಗಿ ಮುಂದಿನ ವರ್ಷ(2016) ಐಐಐಟಿ ಸ್ಥಾಪಿಸುವಂತೆ ನಿಯೋಗವೊಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Advertisement