ಬೆಂಗಳೂರು: ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ 8 ಪೊಲೀಸ್ ಸಿಬ್ಬಂದಿ ವಜಾ

ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಬ್ ಇನ್ಸ್ ಪೆಕ್ಟರ್ ಸೇರಿ ಒಟ್ಟು ಮಂದಿ ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಿ ನಗರ ಪೊಲೀಸ್ ...
ಎನ್.ಎಸ್ ಮೆಘರಿಕ್
ಎನ್.ಎಸ್ ಮೆಘರಿಕ್

ಬೆಂಗಳೂರು:  ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಬ್ ಇನ್ಸ್ ಪೆಕ್ಟರ್ ಸೇರಿ ಒಟ್ಟು ಮಂದಿ ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಿ ನಗರ ಪೊಲೀಸ್ ಆಯುಕ್ತ. ಎನ್.ಎಸ್ ಮೆಘರಿಕ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ನಡೆದಿರುವ ಬ್ಲ್ಯಾಕ್ ಅಂಡ್‌ ವೈಟ್ ದಂಧೆ ಹಾಗೂ ದರೋಡೆ ಪ್ರಕರಣಗಳ ಸಂಬಂಧ ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ಕಲಾಸಿಪಾಳ್ಯ ಪೊಲೀಸ್‌‌ ಠಾಣೆ PSI ಮಲ್ಲಿಕಾರ್ಜುನ್, ಪೇದೆಗಳಾದ ಮಂಜುನಾಥ್ ಮಗೊದ್, ಚಂದ್ರಶೇಖರ್‌, ಎಲ್‌‌.ಕೆ.ಗಿರೀಶ್‌‌, ಅನಂತರಾಜು, ಸಿಸಿಬಿ ಪೇದೆ ಶೇಷಾ ಸೇರಿ 7 ಪೊಲೀಸರು ಸೇವೆಯಿಂದ ವಜಾಗೊಂಡಿದ್ದಾರೆ.

ಗಿರಿನಗರ ಪೊಲೀಸ್‌‌‌ ಠಾಣೆ ಪೇದೆಗಳಾದ ಗಿರೀಶ್‌‌, ಮಯೂರ  8 ಲಕ್ಷ ನಗದು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಕಾಮಾಕ್ಷಿಪಾಳ್ಯ ಪೊಲೀಸರು 35 ಲಕ್ಷ ದರೋಡೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಗಿರಿನಗರದ ಇಬ್ಬರು ಪೇದೆಗಳು ಎಂಟು ಲಕ್ಷ ದರೋಡೆ ಕೇಸ್‌‌‌‌ನಲ್ಲಿ ಭಾಗಿಯಾಗಿದ್ದರು. ಇನ್ನು ಸಿಸಿಬಿ ಪೇದೆ ಶೇಷ 22.3 ಲಕ್ಷ ಡಕಾಯತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com