ಅಸುರಕ್ಷ ಬಿಎಂಟಿಸಿ ಬಸ್, ಖಾಸಗಿ ಬಸ್ ಗಳ ವಿರುದ್ಧ ಆರ್ ಟಿ ಓ ಕ್ರಮ; ಜಪ್ತಿ

ಪ್ರಯಾಣಿಕರ ಸಂಚಾರಕ್ಕೆ ಅಸುರಕ್ಷವಾಗಿರುವ 21 ಬಿಎಂಟಿಸಿ ಬಸ್ಸುಗಳನ್ನು ಸಾರಿಗೆ ಇಲಾಖೆಯ ಜಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಯಾಣಿಕರ ಸಂಚಾರಕ್ಕೆ ಅಸುರಕ್ಷವಾಗಿರುವ 21 ಬಿಎಂಟಿಸಿ ಬಸ್ಸುಗಳನ್ನು ಸಾರಿಗೆ ಇಲಾಖೆಯ ಜಾರಿ ನಿರ್ದೇಶನಾಲಯ ಅತ್ತಿಬೆಲೆಯ ಚೆಕ್ ಪೋಸ್ಟ್ ಗೆ ಕಳುಹಿಸಿದೆ. 
ಸಾರಿಗೆ ಇಲಾಖೆ ಅಧಿಕಾರಿ ಎನ್.ಕಾರಿಯಪ್ಪ ನೇತೃತ್ವದ ತಂಡ ನಗರದ ಸುತ್ತಮುತ್ತ ಕಾರ್ಯಾಚರಣೆ ನಡೆಸಿ 10 ಖಾಸಗಿ ಬಸ್ ಗಳನ್ನು ಜಪ್ತಿ ಮಾಡಿದ್ದಾರೆ.
ದಕ್ಷಿಣ ವಿಭಾಗದ ಬನಶಂಕರಿ, ಕನಕಪುರ ರಸ್ತೆ, ರಿಂಗ್ ರಸ್ತೆಗಳಲ್ಲಿ ಅನಧಿಕೃತ ಖಾಸಗಿ ಬಸ್ ಗಳು ಸಂಚರಿಸುತ್ತಿವೆ ಎಂಬ ದೂರುಗಳು ಬಂದಿದ್ದವು. ಹೀಗಾಗಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 178 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರ ಕುಮಾರ್ ತಿಳಿಸಿದ್ದಾರೆ.
ಪ್ರತಿದಿನ ನಗರದಲ್ಲಿ ಸಾವಿರಾರು ಖಾಸಗಿ ಬಸ್ ಗಳು ಸಂಚರಿಸುತ್ತವೆ. ಅವುಗಳ ಪೈಕಿ ಹಲವು ಬಸ್ಸುಗಳಿಗೆ ಪರವಾನಗಿ ಇಲ್ಲ. ಅಂತಹ ಬಸ್ಸುಗಳನ್ನು ಪತ್ತೆ ಹಚ್ಚಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com