ಉಪನ್ಯಾಸಕರ ವೇತನ ಸಹಿತ ರಜೆ ಪ್ರಸ್ತಾವನೆ ಸಂಪುಟದ ಮುಂದೆ: ತನ್ವೀರ್ ಸೇಠ್

ಬಿ.ಎಡ್ ಕೋರ್ಸ್ ಮಾಡುವ ಉಪನ್ಯಾಸಕರಿಗೆ ವೇತನ ಸಹಿತ ರಜೆ ನೀಡಬೇಕೆಂದು...
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ತನ್ವೀರ್ ಸೇಠ್ ಮತ್ತು ಇಲಾಖೆಯ ಅಧಿಕಾರಿಗಳು
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ತನ್ವೀರ್ ಸೇಠ್ ಮತ್ತು ಇಲಾಖೆಯ ಅಧಿಕಾರಿಗಳು
ಬೆಂಗಳೂರು: ಬಿ.ಎಡ್ ಕೋರ್ಸ್ ಮಾಡುವ ಉಪನ್ಯಾಸಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಉಪನ್ಯಾಸಕರ ಸಂಘಟನೆ ಸಲ್ಲಿಸಿದ್ದ ಮನವಿಯನ್ನು ಸಚಿವ ಸಂಪುಟದ ಎದುರು ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಿನ್ನೆ ನಡೆಸಿದ ಸಭೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡಲಾಗಿತ್ತು. ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇತ್ ಉಪಸ್ಥಿತರಿದ್ದರು.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸೇತ್, ನಾವು ಈ ವಿಚಾರವನ್ನು ಉಪನ್ಯಾಸಕರ ಸಂಘದೊಂದಿಗೆ ಚರ್ಚಿಸಿದ ನಂತರ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಸಂಪುಟದ ಮುಂದೆ ಮಂಡಿಸುತ್ತೇವೆ ಎಂದು ಹೇಳಿದ್ದಾರೆ.
ಪದವಿಪೂರ್ವ ಕಾಲೇಜುಗಳಲ್ಲಿ ಬೋಧನೆ ಮಾಡಲು ಉಪನ್ಯಾಸಕರು ಪದವಿ ಹೊಂದುವುದರ ಜೊತೆಗೆ ಬಿ.ಎಡ್ ಕೋರ್ಸ್ ಕಡ್ಡಾಯವಾಗಿ ಮಾಡಿರಬೇಕೆಂದು  ಸರ್ಕಾರ ರಾನೂನು ಹೊರಡಿಸಿರುವುದರಿಂದ, ಬಿ.ಎಡ್ ಕೋರ್ಸ್ ಮಾಡಲು ತೆರಳುವ ಉಪನ್ಯಾಸಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಉಪನ್ಯಾಸಕರ ಸಂಘ ಒತ್ತಾಯಿಸಿತ್ತು. 
ಉಪನ್ಯಾಸಕರಿಗೆ ವೇತನ ಸಹಿತ ರಜೆ ನೀಡಬೇಕೆ, ಅಥವಾ ಅರ್ಧ ವೇತನ ನೀಡಬೇಕೆ ಅಥವಾ ಸ್ಟೈಪಂಡ್ ನೀಡಬೇಕೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಇದನ್ನು ಉಪನ್ಯಾಸಕರು ಮತ್ತು ಮುಖ್ಯಮಂತ್ರಿಯವರ ಜೊತೆಗೂಡಿ ಚರ್ಚೆ ನಡೆಸಿ ನಂತರ ಅನುಮೋದನೆಗೆ ಸಂಪುಟದ ಮುಂದಿಡಲಾಗುವುದು ಎಂದು ಸಚಿವ ಸೇಠ್ ವಿವರಿಸಿದರು.
ದಾಖಲೆಗಳ ಪ್ರಕಾರ ನಮ್ಮ ರಾಜ್ಯದಲ್ಲಿ 720 ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಬಿ.ಎಡ್ ಕೋರ್ಸ್ ಮಾಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com