ಎರಡನೇ ವಿವಾಹವಾದ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಎರಡನೇ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ....
ಮುತ್ತಪ್ಪ ರೈ
ಮುತ್ತಪ್ಪ ರೈ
Updated on

ಬೆಂಗಳೂರು: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಎರಡನೇ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿಡದಿಯ ನಿವಾಸದಲ್ಲಿ ಸೋಮವಾರ ಅನುರಾಧ ಎಂಬುವರನ್ನು ಶಾಸ್ತ್ರೋಕ್ತವಾಗಿ ವರಿಸಿದ್ದಾರೆ. ಈ ಸಂದರ್ಭದಲ್ಲಿ ರೈ ಕುಟುಂಬ ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಮುತ್ತಪ್ಪ ರೈ ಮೊದಲ ಪತ್ನಿ  ರೇಖಾ ರೈ ಅನಾರೋಗ್ಯದಿಂದ 2013 ರಲ್ಲಿ ನಿಧನರಾಗಿದ್ದರು. ರೇಖಾ ಮತ್ತು ಮುತ್ತಪ್ಪ ರೈ ಅವರಿಗೆ ಎರಡು ಗಂಡು ಮಕ್ಕಳಿವೆ.

ಸಕಲೇಶಪುರದವರಾದ ಅನುರಾಧ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಹಿಳಾ ಉದ್ಯಮಿಯಾಗಿರುವ ಅನುರಾಧ ಮತ್ತು ಮುತ್ತಪ್ಪ ರೈ ಮಧ್ಯೆ ಹಲವು ವರ್ಷಗಳ ಪರಿಚಯವಿತ್ತು. ರೇಖಾ ರೈ ನಿಧನದ ನಂತರ ಇದೀಗ ಇಬ್ಬರು ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com