
ಮಂಗಳೂರು: ಮೂರು ವರ್ಷದ ಹಿಂದೆ ಬಿಹಾರದಲ್ಲಿ ರಾಷ್ಟ್ರೀಯ ತನಿಖಾ ತಂಡ ಯಾಸೀನ್ ಭಟ್ಕಳ್ ನನ್ನು ಬಂಧಿಸಿದಾಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ರಾಷ್ಟ್ರಾದ್ಯಂತ ಸುದ್ದಿ ಮಾಡಿತ್ತು. ಈಗ ಮತ್ತೊಮ್ಮೆ ಭಟ್ಕಳ ಸುದ್ದಿಯಲ್ಲಿದೆ. ಅದು ಯಾಸೀನ್ ಭಟ್ಕಳ್ ಗೆ ಗಲ್ಲು ಶಿಕ್ಷೆ ವಿಧಿಸಿದ ಮೇಲೆ.
ನನ್ನ ಅಣ್ಣನ ಹೆಸರು ಮೊಹಮದ್ ಅಹಮದ್ ಸಿದಿಬಾಪ. ಆತನಿಗೆ ಯಾಸೀನ್ ಭಟ್ಕಳ್ ಎಂದು ಯಾರು ಹೆಸರು ಇಟ್ಟರೋ ಗೊತ್ತಿಲ್ಲ ಎಂದು ಯಾಸೀನ್ ಸಹೋದರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಇನ್ನು ಯಾಸೀನ್ ಭಟ್ಕಳ್ ಗಲ್ಲು ಶಿಕ್ಷೆ ವಿಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಆತನ ತಾಯಿ, ರೆಹಾನ ಬೇಗಂ, ನನ್ನ ಮಗನಿಗೆ ಯಾಸೀನ್ ಭಟ್ಕಳ್ ಎಂದು ಹೆಸರು ನೀಡಿರುವುದನ್ನು ವಿರೋಧಿಸಿ ಹೈಕೋರ್ಟ್ ನಲ್ಲಿ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ, ಈ ಸುಳಿಯಿಂದ ಆತ ಹೊರಬರಬೇಕಿದೆ. ಆತ ಬಂದೇ ಬರುತ್ತಾನೆ. ಒಂದು ವೇಳೆ ಆತ ದೇಶಕ್ಕೆ ದ್ರೋಹ ಎಸಗಿ ತಪ್ಪು ಮಾಡಿದ್ದೇ ಆದರೇ ಆತನಿಗೆ ಶಿಕ್ಷೆಯಾಗಬೇಕು, ನ್ಯಾಯದೇವತೆ ತೀರ್ಪಿನಿಂತೆ ಆತನಿಗೆ ಶಿಕ್ಷೆಯಾಗಲಿ, ದೇಶಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಆಕೆ ಹೇಳಿದ್ದಾರೆ, ಇನ್ನೂ ಗಲ್ಲು ಶಿಕ್ಷೆ ವಿಷಯ ತಿಳಿಯುತ್ತಿದ್ದಂತೆ ಯಾಸೀನ್ ಭಟ್ಕಳ್ ತಂದೆ ಜರಾರಿ ಸಿದಿಬಾಪಾ ಅನಾರೋಗ್ಯಕ್ಕೀಡಾಗಿದ್ದಾರೆ.
ಯಾಸೀನ್ ಭಟ್ಕಳ್ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿಷಯ ತಿಳಿದು ಭಟ್ಕಳದಲ್ಲಿರುವ ಮಕ್ದೂಮ್ ಕಾಲನಿಯಲ್ಲಿ ಯಾವುದೇ ದುಃಖದ ವಾತಾವರಣವಿರಲಿಲ್ಲ, ಆತ 20 ವರ್ಷಗಳ ಹಿಂದೆಯೇ ಭಟ್ಕಳ ಬಿಟ್ಟು ತೆರಳಿದ್ದ, ಆತನ ಮುಖ ಕೂಡ ನಮಗೆ ಆತನ ಮುಖ ಕೂಡ ನೆನಪಿಗೆ ಬರುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement