
ಹಾವೇರಿ: ಗಂಗಬಾವಿ ಕೆಎಸ್ ಆರ್ ಪಿ 10 ಬೆಟಾಲಿಯನ್ ಮುಖ್ಯಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ಶಿಗ್ಗಾವಿಯಲ್ಲಿ ನಡೆದಿದೆ.
53 ವರ್ಷದ ಎನ್.ಜಿ ಮಹೇಶ್ವರಪ್ಪ ಆತ್ಮಹತ್ಯೆಮಾಡಿಕೊಂಡ ಮುಖ್ಯಪೇದೆ. ಕರ್ತವ್ಯದಲ್ಲಿರುವಾಗಲೇ ಮಹೇಶ್ವರಪ್ಪ ತಮ್ಮ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನುಶಿಗ್ಗಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತರಲಾಯಿತು, ಆದರೆ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ
ಮಹೇಶ್ವರಪ್ಪ ಪತ್ನಿ ಅಕ್ಕಗಂಗಮ್ಮ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ತಮ್ಮ ಪತಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂದು ನನಗೆ ತಿಳಿದಿಲ್ಲ ಎಂದು ಆಕೆ ಹೇಳಿದ್ದಾರೆ. ಮಹೇಶ್ವರಪ್ಪ ಮೂಲತಃ ದಾವಣಗೆರೆ ಹಿರೇಗಾಣಗೂರಿನವರಾಗಿದ್ದಾರೆ.
ಮಹೇಶ್ವರಪ್ಪ ತಮನ್ಮ ಸಹೋದ್ಯೋಗಿಗಳಿ ಬಳಿಯು ತನ್ನ ಯಾವುದೇ ಸಮಸ್ಯೆಗಳನ್ನು ಹೇಳಿಕೊಂಡಿರಲಿಲ್ಲ. ಘಟನೆಗೆ ಕಾರಣ ಎಂಬುದು ಏನು ಎಂಬುದು ತಿಳಿದು ಬಂದಿಲ್ಲ. ಹಿರಿಯ ಅಧಿಕಾರಿಗಳಿಂದ ಕಿರುಕುಳ ಇದೆಯೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ,ಮಹೇಶ್ವರಪ್ಪ ಅವರ ಪತ್ನಿ ಜೊತೆ ವಾಸಿಸುತ್ತಿರಲಿಲ್ಲ, ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಶಿವಮೊಗ್ಗದ ಕೆಎಸ್ ಆರ್ ಪಿ 8ನೇ ಬೆಟಾಲಿಯನ್ ನ ನಿಂದ ನಾಲ್ತು ತಿಂಗಳ ಹಿಂದೆ ಶಿಗ್ಗಾವಿಗೆ ಬಡ್ತಿ ನೀಡಿ ಹಾವೇರಿಗೆ ವರ್ಗಾವಣೆ ಮಾಡಲಾಗಿತ್ತು. ತಮ್ಮ ಇಷ್ಟಕ್ಕೆ ಮಹೇಶ್ವರಪ್ಪ 2ನೇ ಪುತ್ರ ವಿವಾಹವಾಗಿದ್ದಕ್ಕೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
Advertisement