ರಾಮಚಂದ್ರಾಪುರ ಮಠ ವಿವಾದ: ಫೇಸ್ ಬುಕ್ ನಲ್ಲಿ ಉಗ್ರಪ್ಪ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ನಿಂದನೆ

ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವುದರ ವಿರುದ್ಧ ಎಂಎಲ್ ಸಿ ವಿ.ಎಸ್ ಉಗ್ರಪ್ಪ ದೂರು ದಾಖಲಿಸಿದ್ದಾರೆ....
ವಿ.ಎಸ್ ಉಗ್ರಪ್ಪ
ವಿ.ಎಸ್ ಉಗ್ರಪ್ಪ

ಬೆಂಗಳೂರು: ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವುದರ ವಿರುದ್ಧ ಎಂಎಲ್ ಸಿ ವಿ.ಎಸ್ ಉಗ್ರಪ್ಪ ದೂರು ದಾಖಲಿಸಿದ್ದಾರೆ.

ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ರಾಘವೇಶ್ವರ ಶ್ರೀಗಳನ್ನು ಪದಚ್ಯುತಗೊಳಿಸಿ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹ ಮಾಡಿದ್ದಕ್ಕಾಗಿ 'ಸ್ವಚ್ಛ ಬ್ರಾಹ್ಮಣ ವೇದಿಕೆ' ಹೆಸರಿನ ಫೇಸ್‌ಬುಕ್‌ ಗುಂಪಿನಲ್ಲಿ, ಕೀಳು ಭಾಷೆ ಬಳಸಿ ಅವಹೇಳನ ಮಾಡಲಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ನಿಯಂತ್ರಣ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ವಿ.ಎಸ್‌.ಉಗ್ರಪ್ಪ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸ್ವಚ್ಚ ಬ್ರಾಹ್ಮಣ ವೇದಿಕೆ ಹೆಸರಿನಲ್ಲಿ ಮಾಡಿರುವ ಪೋಸ್ಟ್ ಗೆ ನನ್ನ ವಿರುದ್ದ ಸುಮಾರು 98 ಕಮೆಂಟ್ಸ್ ಗಳು ಬಂದಿವೆ, ಅದರಲ್ಲಿ 90 ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದೇನೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ

ರಾಮಚಂದ್ರಾಪುರ ಮಠದ ಭಕ್ತರು ಎಂದು ಹೇಳಿಕೊಳ್ಳುವ ಗುಂಪು ಫೇಸ್‌ಬುಕ್‌ನಲ್ಲಿ ನನ್ನ ಬಗ್ಗೆ ತುಚ್ಛವಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದು, ಕಾಂಗ್ರೆಸ್‌ ಪಕ್ಷ ಮತ್ತು ಸರಕಾರದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ವಿದ್ಯೆ, ವಿನಯ ಎರಡೂ ಇಲ್ಲದ ಇಂತಹ ಮಠದ ಈ ಭಕ್ತರಿಂದ ನನಗೆ, ನಮ್ಮ ಕುಟುಂಬಕ್ಕೆ ಯಾವುದೇ ತೊಂದರೆ ಎದುರಾದರೂ ಅದಕ್ಕೆ ರಾಮಚಂದ್ರಾಪುರ ಮಠ ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿಗಳೇ ಹೊಣೆ ಎಂಬುದನ್ನೂ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಸ್ಪಷ್ಟಪಡಿಸಿದ್ದೇನೆ  ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com