ಪ್ರಯಾಣಿಕರ ಸೌಕರ್ಯಗಳ ಕೆಲಸ ನಡೆಯಲಿರುವುದರಿಂದ ಡಿಸೆಂಬರ್ 26ರಿಂದ ಜನವರಿ 16ರವರೆಗೆ ವಿಧಾನಸೌಧ ನಿಲ್ದಾಣದ ಒಂದು ಪ್ರವೇಶ ದ್ವಾರ ಮುಚ್ಚಲಿದೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಹೆಚ್ಚುವರಿ ಎಸ್ಕಲೇಟರ್ ಗಳ ನಿಲ್ದಾಣದಲ್ಲಿ ಒದಗಿಸಲಾಗುತ್ತಿದೆ ಎಂದು ಮೆಟ್ರೊ ರೈಲು ನಿಗಮದ ಹೇಳಿಕೆ ತಿಳಿಸಿದೆ. ಕಬ್ಬನ್ ಪಾರ್ಕ್ ಮತ್ತು ಹೈಕೋರ್ಟ್ ನ ಡಿ ಪ್ರವೇಶ ದ್ವಾರವನ್ನು ಜನವರಿ 16ರವರೆಗೆ ಮುಚ್ಚಲಾಗುತ್ತದೆ.