ಮೈಸೂರು ಮೃಗಾಲಯಕ್ಕೆ ಆನೆಗಳನ್ನು ವಾಪಸ್ ನೀಡಿದ ಸುತ್ತೂರು ಮಠ

ಸುತ್ತೂರು ಶಾಖಾ ಮಠವು ಮೈಸೂರು ಮೃಗಾಲಯಕ್ಕೆ ಎರಡು ಆನೆ ಮರಿಗಳನ್ನು ವಾಪಸ್‌ ನೀಡಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರಿದ ಆದೇಶದ ಮೇರೆಗೆ...
ಎರಡು ಆನೆಗಳನ್ನು ಮೈಸೂರು ಮೃಗಾಲಯಕ್ಕೆ  ನೀಡಿದ ಸುತ್ತೂರು ಮಠ
ಎರಡು ಆನೆಗಳನ್ನು ಮೈಸೂರು ಮೃಗಾಲಯಕ್ಕೆ ನೀಡಿದ ಸುತ್ತೂರು ಮಠ

ಮೈಸೂರು: ಸುತ್ತೂರು ಶಾಖಾ ಮಠವು ಮೈಸೂರು ಮೃಗಾಲಯಕ್ಕೆ ಎರಡು ಆನೆ ಮರಿಗಳನ್ನು ವಾಪಸ್‌ ನೀಡಿದೆ.  ಕೇಂದ್ರ ಮೃಗಾಲಯ ಪ್ರಾಧಿಕಾರಿದ ಆದೇಶದ ಮೇರೆಗೆ ಚಂಪಾ ಮತ್ತು ದ್ರೋಣ ಎಂಬ ಮರಿಯಾನೆಗಳನ್ನು ಮೃಗಾಲಯದ ವಶಕ್ಕೆ ನೀಡಲಾಯಿತು.

ಕೆಲ ವರ್ಷಗಳ ಹಿಂದೆ ಅರಣ್ಯ ಇಲಾಖೆಯಿಂದ ಸುತ್ತೂರು ಮಠ ಎರಡು ಆನೆಗಳನ್ನು ಬದಲಾವಣೆ ಮಾಡಿಕೊಂಡಿತ್ತು. ಮಠದಲ್ಲಿದ್ದ ಮಾಸ್ತಿ ಮತ್ತು ಲಕ್ಷ್ಮಿ ಎಂಬ ಆನೆಗಳನ್ನ ಅರಣ್ಯ ಇಲಾಖೆಗೆ ನೀಡಿ ಎರಡು ಬೇರೆ ಆನೆಗಳನ್ನು ಮಠ ಪಡೆದುಕೊಂಡಿತ್ತು. ಆದರೆ ಪ್ರಾಣಿಗಳ ಬದಲಾವಣೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತ್ತು. ಜೊತೆಗೆ ಪಡೆದುಕೊಂಡಿರುವ ಆನೆಗಳನ್ನು ವಾಪಸ್ ನೀಡಿ, ಕೊಟ್ಟಿದ್ದ ಆನೆಗಳನ್ನು ವಾಪಸ್ ಪಡೆದುಕೊಳ್ಳಲು  ಸೂಚಿಸಿತ್ತು.

ಆದರೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಗಳು ಮಾಸ್ತಿ ಮತ್ತು ಲಕ್ಷ್ಮಿ ಆನೆಯನ್ನು ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ಮಾಸ್ತಿ ಮತ್ತು ಲಕ್ಷ್ಮಿ ಆನೆಗಳು ತುಂಬಾ ಹಿಂಸಾಚಾರ ಮಾಡುತ್ತಿದ್ದರಿಂದ ಅವುಗಳನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರಿನ ಸುತ್ತೂರು ಶಾಖಾ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಠದಲ್ಲಿದ್ದ ದ್ರೋಣ ಹಾಗೂ ಚಂಪಾ ಆನೆ ಮರಿಗಳನ್ನ ಸರ್ಕಾರದ ಆದೇಶದ ಅನ್ವಯ ಇಂದು ಅರಣ್ಯ ಇಲಾಖೆಯವರಿಗೆ ಪೂಜೆ ಸಲ್ಲಿಸಿ ಹಸ್ತಾಂತರಿಸಿದರು.

ಮಾಸ್ತಿ ಆನೆಯನ್ನು ತಿಥಿಮತಿ ಆನೆ ಶಿಬಿರಕ್ಕೆ ನೀಡಲಾಗಿದ್ದು, ಲಕ್ಷ್ಮಿ ಸದ್ಯ ಬನ್ನೀರುಘಟ್ಟ ರಾಷ್ಟ್ರೀಯ ಉದ್ಯಾವನದಲ್ಲಿ ಬಿಡಲಾಗಿದೆ. ಇನ್ನೂ ಈ ಆನೆಗಳನ್ನು ಮಠದಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಬಳಸಿಕೊಳ್ಳಲಾಗುತ್ತಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com