ಹಂಪಿ ಉತ್ಸವ: ಗೆದ್ದ ಕ್ರೀಡಾಪಟುಗಳಿಗೆ ಸರ್ಕಾರ ನೀಡಿದ್ದ ಚೆಕ್ ಬೌನ್ಸ್

ಹಂಪಿ ಉತ್ಸವದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಜಯಗಳಿಸಿದ್ದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಬಹುಮಾನ ರೂಪದಲ್ಲಿ ನೀಡಿದ್ದ ಚೆಕ್ ಬೌನ್ಸ್ ...
ಬೌನ್ಸ್ ಆಗಿರುವ ಚೆಕ್ ಬಗ್ಗೆ ಮೆಮೋ ನೀಡಿರುವ ಸಿಂಡಿಕೇಟ್ ಬ್ಯಾಂಕ್
ಬೌನ್ಸ್ ಆಗಿರುವ ಚೆಕ್ ಬಗ್ಗೆ ಮೆಮೋ ನೀಡಿರುವ ಸಿಂಡಿಕೇಟ್ ಬ್ಯಾಂಕ್

ಬಳ್ಳಾರಿ: ಹಂಪಿ ಉತ್ಸವದಲ್ಲಿ ಆಯೋಜಿಸಿದ್ದ ಕ್ರೀಡೆಯಲ್ಲಿ ಜಯಗಳಿಸಿದ್ದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಬಹುಮಾನ ರೂಪದಲ್ಲಿ ನೀಡಿದ್ದ ಚೆಕ್ ಬೌನ್ಸ್ ಆಗಿದೆ.

ನವೆಂಬರ್ 3 ರಿಂದ 5 ರವರೆಗೆ ನಡೆದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಜಯಗಳಿಸಿದ ವಿಜೇತರಿಗೆ ನಗದು ಮಾಡಿಸಿಕೊಳ್ಳುವಂತೆ ಚೆಕ್ ನೀಡಲಾಗಿತ್ತು. ವಿಜೇತರು ಸಿಂಡಿಕೇಟ್ ಬ್ಯಾಂಕ್ ಗೆ ಚೆಕ್ ಹಾಕಿದಾಗ ಅದು ಬೌನ್ಸ್ ಆಗಿರುವುದು ಕ್ರೀಡಾಪಟುಗಳಿಗೆ ಅಚ್ಚರಿಯಾಗಿದೆ.ಖಾತೆಯಲ್ಲಿ  ನಿಗದಿತ ಪ್ರಮಾಣದ ಹಣ ಇಲ್ಲದಿರುವುದು ಚೆಕ್ ಬೌನ್ಸ್ ಗೆ ಕಾರಣವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮತ್ತು ಜಿಲ್ಲಾಡಳಿತ ಆಯೋಜಿಸಿದ್ದ ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು. ಉತ್ಸವದ ಅಂಗವಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಆದರೆ ಯುವಜನ ಮತ್ತು ಕ್ರೀಡಾ ಇಲಾಖೆ ಮಾಡಿದ ತಪ್ಪಿನಿಂದಾಗಿ ಚೆಕ್ ಬೌನ್ಸ್ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಡಳಿತಕ್ಕೆ ಮುಜುಗರ ಉಂಟಾಗಿದೆ.

ಬ್ಯಾಡ್ಮಿಂಟನ್, ಸ್ವಿಮ್ಮಿಂಗ್, ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ನವೆಂಬರ್-3 ರಂದು ಹೊಸಪೇಟೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಗೆದ್ದವರಿಗೆ ಮೊದಲ ಬಹುಮಾನವಾಗಿ 5 ಸಾವಿರ ರು, ರನ್ನರ್ ಅಪ್ ಗೆ 3. ಸಾವಿರ ರು. ಚೆಕ್ ನೀಡಲಾಗಿತ್ತು. ಈ ವೇಳೆ ನೀಡಿದ್ದ 8 ಚೆಕ್ ಗಳು ಬೌನ್ಸ್ ಆಗಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಕ್ರೀಡಾಪಟುಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com