ಮೈಸೂರು ಪಾಲಿಕೆ ಜೆಡಿಎಸ್ ಕಾರ್ಪೋರೇಟರ್ ಗೆ ಜೀವಾವಧಿ ಶಿಕ್ಷೆ

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಪೋರೇಟರ್ ಸಿ. ಮಹಾದೇಶ್ (ಅವ್ವ ಮಾದೇಶ) ಸೇರಿದಂತೆ ಎಂಟು ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ....
ಸಿ. ಮಹಾದೇಶ್
ಸಿ. ಮಹಾದೇಶ್

ಮೈಸೂರು: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೊರವಲಯದಲ್ಲಿ 8 ವರ್ಷದ ಹಿಂದೆ ನಡೆದಿದ್ದ ಭೀಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಪೋರೇಟರ್ ಸಿ. ಮಹಾದೇಶ್ (ಅವ್ವ ಮಾದೇಶ) ಸೇರಿದಂತೆ ಎಂಟು ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಿ. ಮಹಾದೇಶ್, ಅವರ ಸಹೋದರ ಸಿ. ಮಂಜುನಾಥ್, ಅಕ್ಕನ ಮಗ ಅಂಬರೀಷ್, ಶಿವಕುಮಾರ್, ಪಾಲಹಳ್ಳಿ ಸತೀಶ, ಡಿಚ್ಚಿ ರವಿ, ಚಂದು, ಕಾರ್ತಿಕ್ ಜೀವಾವಧಿ ಶಿಕ್ಷೆಗೆ ಗುರಿಯಾದವರು. ಸೂಕ್ತ ಸಾಕ್ಷ್ಯ ಸಿಗದ ಕಾರಣ ಶಿವ ನಿಶ್ಚಿತ್ ಎಂಬಾತನನ್ನು ಖುಲಾಸೆಗೊಳಿಸಲಾಗಿದೆ.

ವಿಜಯನಗರ ಬಡಾವಣೆ ಜಾಗಕ್ಕೆ ಸಂಬಂಧಿಸಿದಂತೆ ಮಹಾದೇಶ್ ಹಾಗೂ ಗುಂಪೊಂದರ ನಡುವೆ ವಿವಾದ ಉಂಟಾಗಿತ್ತು. ಪಡುವಾರಹಳ್ಳಿ ರಾಜೇಶ್ (ಗಾಂಧಿ) ಎಂಬಾತ ಎದುರಾಳಿ ಗುಂಪನ್ನು ನನ್ನ ಮೇಲೆ ಎತ್ತಿಕಟ್ಟಿ ದಾಳಿ ನಡೆಸಲು ಯತ್ನಿಸುತ್ತಿದ್ದಾನೆ ಎನ್ನುವುದು ಮಹಾದೇಶ್ ಸಿಟ್ಟಿಗೆ ಕಾರಣವಾಗಿತ್ತು. ಸೇಡು ತೀರಿಸಿಕೊಳ್ಳಲು ಮಹಾದೇಶ್ ಗುಂಪು ಕಾಯುತ್ತಿತ್ತು. ಈ ವಿಚಾರ ತಿಳಿದೇ ಪಡುವಾರಹಳ್ಳಿಯ ರಾಜೇಶ್ ಹಾಗೂ ಆತನ ಸ್ನೇಹಿತರಾದ ರಾಮು, ಸುನೀಲ ದಾಳಿಯಿಂದ ತಪ್ಪಿಸಿಕೊಳ್ಳಲು ಹುಣಸೂರಿನಲ್ಲಿ ಅಡಗಿಕೊಂಡಿದ್ದರು.

ಹುಣಸೂರು ಎಪಿಎಂಸಿ ಹಿಂಭಾಗದಲ್ಲಿರುವ ಮುದ್ದಪ್ಪ ಎನ್ನುವವರ ತೋಟದ ಮನೆಯಲ್ಲಿ ಆಶ್ರಯ ಪಡೆದಿದ್ದ ನಾಲ್ವರ ಮೇಲೆ ದಾಳಿ ಮಾಡಲು ಮಹಾದೇಶ್ ಹಾಗೂ 8 ಮಂದಿ 2008ರ ಮೇ 14ರ ರಾತ್ರಿ ಹೋಗಿತ್ತು. ಬಾಗಿಲನ್ನು ಮುರಿದು ರಾಜೇಶ ಹಾಗೂ ರಾಮುವನ್ನು ಮಚ್ಚುಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪೊಲೀಸರು ಮಹಾದೇಶ್ ಮತ್ತು ಆತನ ಸಹಚರರನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅವರು ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಮಹಾದೇಶ್ 3 ಲಕ್ಷ ರೂ. ಹಾಗೂ ಉಳಿದ ಆರೋಪಿಗಳು ತಲಾ ಒಂದು ಲಕ್ಷ ರೂ. ದಂಡ ಪಾವತಿಸಬೇಕು. ಇದರಲ್ಲಿ ಕೊಲೆಯಾದ ರಾಜೇಶ್ ಹಾಗೂ ರಾಮು ಕುಟುಂಬಕ್ಕೆ ತಲಾ 3 ಲಕ್ಷ ರೂ. ನೀಡಿ ಉಳಿಕೆ ಮೊತ್ತ ಸರಕಾರಕ್ಕೆ ಜಮೆ ಮಾಡಬೇಕು ಎಂಬುದಾಗಿ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com