ಬಾಲಕರ ವಿವಸ್ತ್ರಗೊಳಿಸಿ ಹಲ್ಲೆ: ಶಾಲೆ ಮತ್ತು ಹೊಸಕೋಟೆ ಪೊಲೀಸರಿಗೆ ನೋಟಿಸ್

ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಅಪ್ರಾಪ್ತ ಬಾಲಕರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಮಾರಣಾಂತಿಕ...
ಬಾಲಕರನ್ನು ಥಳಿಸುತ್ತಿರುವ ದೃಶ್ಯ
ಬಾಲಕರನ್ನು ಥಳಿಸುತ್ತಿರುವ ದೃಶ್ಯ
Updated on
ಬೆಂಗಳೂರು: ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಅಪ್ರಾಪ್ತ ಬಾಲಕರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಆಯೋಗ ಶಾಲಾ ಪ್ರಾಚಾರ್ಯರಿಗೆ ಹಾಗೂ ಹೊಸಕೋಟೆ ಪೊಲೀಸರಿಗೆ ನೋಟಿಸ್ ನೀಡಿದೆ.
ಶಾಲಾ ಅವಧಿಯಲ್ಲಿ ಮಕ್ಕಳನ್ನು ಕರೆದೊಯ್ದರು ಪೋಷಕರಿಗೆ ಮಾಹಿತಿ ನೀಡಲ ಶಾಲಾ ಪ್ರಾಚಾರ್ಯರಿಗೆ ಹಾಗೂ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ ಪೊಲೀಸರಿಗೆ ಆಯೋಗ ಇಂದು ನೋಟಿಸ್ ನೀಡಿದ್ದು, ಎರಡು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.
ಕಳೆದ ಜೂನ್‌ 30 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ವ್ಯಾಪಾರಿ ಮುಸ್ತಾಕ್‌ ಎನ್ನುವವರ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಇದೇ ಆರೋಪದಲ್ಲಿ ಮುಸ್ತಾಕ್‌ ಅವರ ಪುತ್ರ ನೂರುದ್ದೀನ್‌ ತನ್ನ 6 ಮಂದಿ ಸ್ನೇಹಿತರೊಂದಿಗೆ ಬಾಲಕರನ್ನು ಶಾಲೆಯಿಂದ ಬಯಲಿಗೆ ಎಳೆದೊಯ್ದು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು.
ಬಾಲಕರು ಬಿದ್ದು ಗೊಗೆರೆದರೂ ಬಿಡದ ಹಲ್ಲೆ ಕೋರರು ಬಾಲಕರ ಕೈಕಾಲುಗಳನ್ನು ತಿರುಚಿ, ಅವರ ಮೈಮೇಲೆ ನಿಂತು ರಕ್ಕಸರಂತೆ ವರ್ತಿಸಿದ್ದರು. ಈ ಎಲ್ಲಾ ಅಟ್ಟಹಾಸವನ್ನು ವಿಡಿಯೋ ಚಿತ್ರಿಕರಣ ಮಾಡಿಕೊಂಡು ಇತರರಿಗೆ ತೋರಿಸಿ ತಮ್ಮ ಏರಿಯಾದಲ್ಲಿ ಹವಾ ಹೇಗಿದೆ ಎನ್ನುವದನ್ನು ತೋರಿಸಲು ಮುಂದಾಗಿದ್ದಾರೆ. 
ಹಲ್ಲೆಯ ಬಳಿಕ ತೀವ್ರ ಅಸ್ವಸ್ಥಗೊಂಡ ಬಾಲಕರು ಮನೆಗೆ ಬಂದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಬೇಜವಾಬ್ದಾರಿತನ ಪ್ರದರ್ಶಿಸಿ ಪ್ರಕರಣ ದಾಖಲಿಸಿಲು ಹಿಂಜರಿದಿದ್ದರು. 
ಘಟನೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಹೊಸಕೋಟೆ ಪೊಲೀಸರು ಪ್ರರಕಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com