ಮಣ್ಣು ಕುಸಿದುಬಿದ್ದು ಮೂವರು ಕಾರ್ಮಿಕರು ಸಾವು

ಕೋರಮಂಗಲದ 7ನೇ ಬ್ಲಾಕ್ ನಲ್ಲಿ ಕಟ್ಟಡ ನಿರ್ಮಾಣ ಸೈಟಿನಲ್ಲಿ ಗುಂಡಿಯೊಂದನ್ನು ಅಗೆಯುವಾಗ ಮಣ್ಣು ಕುಸಿದು ಮೂವರು ...
ಕೋರಮಂಗಲದಲ್ಲಿ ಕಟ್ಟಡ ನಿರ್ಮಾಣ ವೇಳೆ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರ ದೇಹವನ್ನು ಮೇಲೆತ್ತುತ್ತಿರುವ ಅಗ್ನಿಶಾಮಕ ಮತ್ತು ತುರ್ತು ಇಲಾಖೆ ಸಿಬ್ಬಂದಿ
ಕೋರಮಂಗಲದಲ್ಲಿ ಕಟ್ಟಡ ನಿರ್ಮಾಣ ವೇಳೆ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರ ದೇಹವನ್ನು ಮೇಲೆತ್ತುತ್ತಿರುವ ಅಗ್ನಿಶಾಮಕ ಮತ್ತು ತುರ್ತು ಇಲಾಖೆ ಸಿಬ್ಬಂದಿ
ಬೆಂಗಳೂರು: ಕೋರಮಂಗಲದ 7ನೇ ಬ್ಲಾಕ್ ನಲ್ಲಿ ಕಟ್ಟಡ ನಿರ್ಮಾಣ ಸೈಟಿನಲ್ಲಿ ಗುಂಡಿಯೊಂದನ್ನು ಅಗೆಯುವಾಗ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗಾಯವಾಗಿದ ಘಟನೆ ನಿನ್ನೆ ಸಂಜೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಮತ್ತು ತುರ್ತು ಸೇವೆ ಇಲಾಖೆಯವರು ಹತ್ತಿರದ ಮನೆಗಳ ನಿವಾಸಿಗಳನ್ನು ಸುರಕ್ಷತೆ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಸಾವಿಗೀಡಾದವರಲ್ಲಿ ರುಕ್ಚಾನ ಮತ್ತು ಇಶ್ರಫಿರ್ ಎಂಬಿಬ್ಬರು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಶಿವಲಿಂಗ ಕೋರಮಂಗಲದವನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದರು. ಕಟ್ಟಡದ ಅಡಿಪಾಯಕ್ಕೆ ಗುಂಡಿ ಅಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಸೈಟ್ ಮಾಲಿಕ ಝುಬೇರ್ ಆಗಲಿ, ಎಂಜಿನಿಯರ್ ಆಗಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಣ್ಣು ತಮ್ಮ ಮೇಲೆ ಬಿದ್ದಾಗ ಕಾರ್ಮಿಕರು ಕಿರುಚಲು ಆರಂಭಿಸಿದರು. ತಕ್ಷಣವೇ ಸ್ಥಳೀಯರು ಅಗ್ನಿ ಶಾಮಕ ಮತ್ತು ತುರ್ತು ಇಲಾಖೆಗೆ ಸುದ್ದಿ ಮುಟ್ಟಿಸಿದರು. ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಸಾವನ್ನಪ್ಪಿದ್ದರು. ಗಾಯಗೊಂಡವನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರ್ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಸೈಟ್ ಮಾಲೀಕರ ವಿರುದ್ಧ ಕೇಸು ದಾಖಲಿಸಿದರು. ಮಾಲೀಕ ಅಡಿಪಾಯ ಕಾಮಗಾರಿ ಆರಂಭಿಸುವ ಮುನ್ನ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ ಮತ್ತು ಪಾಲಿಕೆಯಿಂದ ಅನುಮತಿ ಪಡೆದಿರಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಯಲ್ಲಿ ಸುರಕ್ಷತಾ ವಾಹನ, ಆಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳು ಸೇರಿದ್ದರಿಂದ ಫೋರಂ ಮಾಲ್ ಹತ್ತಿರ ಗಣಪತಿ ದೇವಸ್ಥಾನ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಿತ್ತು.
 ಇಲ್ಲಿ ಕಾಮಗಾರಿ ವಾರದ ಹಿಂದೆಯಷ್ಟೇ ಆರಂಭವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com