ಹಿರಿಯ ಪೊಲೀಸ್ ಅಧಿಕಾರಿಗಳ ಸಂಚಿಗೆ ಬಲಿಯಾದರೆ ಕಲ್ಲಪ್ಪ ಹಂಡಿಭಾಗ್?

ಚಿಕ್ಕಮಗಳೂರು ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಯಾರೋ ತೋಡಿದ ಹಳ್ಳಕ್ಕೆ ಬಿದ್ದು ಬಲಿಪಶುವಾಗಿದ್ದಾರೆ. ಕಿಡ್ನಾಪ್ ಪ್ರಕರಣದ ಅರಿವಿಲ್ಲದೇ ಹಿರಿಯ
ಕಲ್ಲಪ್ಪ ಹಂಡಿಭಾಗ್
ಕಲ್ಲಪ್ಪ ಹಂಡಿಭಾಗ್

ಬೆಂಗಳೂರು: ಚಿಕ್ಕಮಗಳೂರು ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಯಾರೋ ತೋಡಿದ ಹಳ್ಳಕ್ಕೆ ಬಿದ್ದು ಬಲಿಪಶುವಾಗಿದ್ದಾರೆ. ಕಿಡ್ನಾಪ್ ಪ್ರಕರಣದ ಅರಿವಿಲ್ಲದೇ ಹಿರಿಯ ಅಧಿಕಾರಿಯೊಬ್ಬರ ಆದೇಶದಂತೆ ಹಣ ತರಲು ಹೋಗಿ ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಮೇಲೆ ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪ ಹೊರಬಂದ ಮೇಲೆ ಜುಲೈ 4ರಂದು ಕಲ್ಲಪ್ಪ ಹಂಡಿಭಾಗ್ ಸಾವಿಗೆ ಶರಣಾಗಿದ್ದಾರೆ.

ಸಿಐಡಿ ಅಧಿಕಾರಿಗಳು ಹೇಳುವ ಪ್ರಕಾರ, ಕಲ್ಮನೆ ನಟರಾಜ್ ಎಂಬುವರ ಬಳಿಯಿಂದ ತೇಜಸ್ ಗೌಡ 35 ಲಕ್ಷ ರು. ಹಣ ಸಾಲ ಪಡೆದಿದ್ದ. ಆದರೆ ಪಡೆದ ಹಣವನ್ನು ವಾಪಸ್ ಕೊಡಲು ತೇಜಸ್ ಗೌಡ ನಿರಾಕರಿಸಿದಾಗ, ನಾಗರಾಜ್, ಚಿಕ್ಕಮಗಳೂರು ವಿಎಚ್ ಪಿ ಮುಖಂಡ ಪ್ರವೀಣ್ ಖಾಂಡ್ಯ ಅವರ ಬಳಿ ಹಣ ವಾಪಸ್ ಪಡೆಯಲು ಸಹಾಯ ಕೇಳಿದ್ದಾರೆ. ಪ್ರವೀಣ್ ಖಾಂಡ್ಯ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಾಯ ಮಾಡುವಂತೆ ಕೋರಿದ್ದಾನೆ.

ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೇಜಸ್ ಗೌಡ ಪಾಲ್ಗೊಂಡಿದ್ದ. ಈ ಕಾರ್ಯಕ್ರಮಕ್ಕೆ ಪ್ರವೀಣ್ ಖಾಂಡ್ಯ ಮತ್ತು ಅವನ ಸಹಚರರು ಕೂಡ ಆಗಮಿಸಿದ್ದರು. ಕಾರ್ಯಕ್ರಮದ ನಂತರ ತೇಜಸ್ ಗೌಡ ಜೂಜಾಡಲು ತೆರಳಿದ. ಪ್ರವೀಣ್ ಖಾಂಡ್ಯ ಸಹಚರರು ತೇಜಸ್ ಗೌಡ ಜೂಜಾಡುತ್ತಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ತೇಜಸ್ ಗೌಡ ಸೇರಿದಂತೆ ಜೂಜಾಡುತ್ತಿದ್ದ ಎಲ್ಲರನ್ನು ಬಂಧಿಸಿದರು, ನಂತರ ತೇಜಸ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.  

ಜೈಲಿನಿಂದ ಬಿಡುಗಡೆಗೊಂಡ ತೇಜಸ್  ಗೌಡನನ್ನು ಪ್ರವೀಣ್ ಖಾಂಡ್ಯ ಸಹಚರರು ಕಿಡ್ನಾಪ್ ಮಾಡಿದ್ದರು. ಇದಾದ ನಂತರ ತೇಜಸ್ ಹಣ ನೀಡುವುದಾಗಿ ಒಪ್ಪಿಕೊಂಡು ತನ್ನ ಸ್ನೇಹಿತ ಪವನ್ ಎಂಬಾತನ ಮೂಲಕ ಹಣ ಕೊಡಿಸುವುದಾಗಿ ತಿಳಿಸಿದ್ದ. ಆದರೆ ಹಣ ನೀಡುವಲ್ಲಿ ಮತ್ತೆ  ವಂಚನೆ ಮಾಡಬಹುದು ಎಂಬ ಉದ್ದೇಶದಿಂದ ಪ್ರವೀಣ್ ಖಾಂಡ್ಯ ಮತ್ತೆ ಆ ಹಿರಿಯ ಪೊಲೀಸ್ ಅಧಿಕಾರಿಯ ಸಹಾಯ ಕೇಳಿದ್ದಾನೆ.

ಈ ವೇಳೆ ಕಲ್ಲಪ್ಪ ಹಂಡಿಭಾಗ್ ಅವರಿಗೆ ಫೋನ್ ಮಾಡಿದ ಆ ಹಿರಿಯ ಅಧಿಕಾರಿ ಹಣ ಸಂಗ್ರಹಿಸುವಂತೆ ಆದೇಸಿದ್ದಾರೆ. ಪ್ರಕರಣದ ಅರಿವಿಲ್ಲದ ಹಂಡಿಬಾಗ್ ಪವನ್ ಗೆ ಫೋನ್ ಮಾಡಿ ಹಣವನ್ನು ತಮ್ಮ ವಸತಿಗೃಹಕ್ಕೆ ತಂದು ಕೊಡುವಂತೆ ಹೇಳಿದ್ದಾರೆ. ಈ ವೇಳೆ ಹಂಡಿಭಾಗ್ ಹಣ ತಂದು ಕೊಂಡುವಂತೆ ಹೇಳಿ ಫೋನ್ ನಲ್ಲಿ ಮಾತನಾಡಿದ್ದ ಸಂಭಾಷಣೆಯನ್ನು ಪವನ್ ರೆಕಾರ್ಡ್ ಮಾಡಿಕೊಂಡಿದ್ದ.

ತೇಜಸ್ ಗೌಡ ಅಪಹರಣಕಾರರಿಂದ ಬಿಡುಗಡೆಗೊಂಡ ನಂತರ ಕಲ್ಲಪ್ಪ ಹಂಡಿಭಾಗ್ ಮಾತನಾಡಿದ್ದ ಆಡಿಯೋ ಕ್ಲಿಪ್ ಅನ್ನು ಪವನ್ ಬಿಡುಗಡೆಗೊಳಿಸಿ, ಅದು ಮಾಧ್ಯಮಗಳಿಗೆ ತಲುಪುವಂತೆ ಮಾಡಿದ್ದಾನೆ.

ಆದರೆ ಕಲ್ಲಪ್ಪ ಹಂಡಿಭಾಗ್ ಅವರೇ ಕಿಡ್ನಾಪ್ ಮಾಡಿಸಿರುವಂತೆ ಬಿಂಬಿಸಲಾಯಿತು. ಆದರೆ ಕಾಲ್ ರೆಕಾರ್ಡಿಂಗ್ ನಲ್ಲಿ ಇರುವ ಧ್ವನಿ ತನ್ನದೇ ಆದ್ದರಿಂದ ಪ್ರಕರಣದಿಂದ ತನೆಗ ಕ್ಲೀನ್ ಚಿಟ್ ದೊರೆಯುವುದು ಅನುಮಾನ ಎಂದು ಕಲ್ಲಪ್ಪ ಹಂಡಿಭಾಗ್ ತಮ್ಮ ಬ್ಯಾಚ್ ಮೇಟ್ ಗಳ ಬಳಿ ಹೇಳಿಕೊಂಡಿದ್ದರು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಕಲ್ಲಪ್ಪ ಹಂಡಿಭಾಗ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದಾದರೇ  ತಮ್ಮ ಕಚೇರಿಯ ಅಧಿಕೃತ ನಂಬರ್ ನಿಂದ ಪವನ್ ಗೆ ಏಕೆ ಕರೆ ಮಾಡುತ್ತಿದ್ದರು? ಫೋನ್ ಮಾಡಿ ತಮ್ಮ ನಿವಾಸಕ್ಕೆ ಬಂದು ಹಣ ಕೊಡುವಂತೆ ಯಾಕೆ ಹೇಳುತ್ತಿದ್ದರು? ಎಂಬುದು ಪ್ರಶ್ನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com