ಬೆಂಗಳೂರು: ಜೂನ್ 20ರಿಂದ 25ರವರೆಗೆ ನಡೆದಿದ್ದ ಹತ್ತನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಳ್ಳಲಿದೆ.ಇಂದು ಅಪರಾಹ್ನ 3 ಗಂಟೆಗೆ ಇಲಾಖೆಯ ಜಾಲತಾಣ www.sslc.kar.nic.in, karresults.nic.in ನಲ್ಲಿ ಫಲಿತಾಂಶ ನೋಡಬಹುದು.
ನಾಳೆ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.
ಮಾರ್ಚ್ ನಲ್ಲಿ ನಡೆದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪ್ರೌಢ ಶಿಕ್ಷಣ ಮಂಡಳಿ ಪೂರಕ ಪರೀಕ್ಷೆ ನಡೆಸಿತ್ತು.