ಗಣಪತಿ
ರಾಜ್ಯ
ಡಿಜಿ ಕಚೇರಿಯಿಂದ ಬಂದಿದ್ದ ಕರೆ ಕಾರಣವಾಯ್ತಾ ಗಣಪತಿ ಆತ್ಮಹತ್ಯೆಗೆ?
ಗಣಪತಿ ಆತ್ಮಹತ್ಯೆಗೂ ಮುನ್ನ, ಹಳೇ ಪ್ರಕರಣದ ವಿಚಾರಣೆ ಸಂಬಂಧವಾಗಿ ಅವರ ಮೊಬೈಲ್‌ಗೆ ಡಿಜಿ ಕಚೇರಿ ಸಿಬ್ಬಂದಿಯೊಬ್ಬರು ಕರೆ ಮಾಡಿದ್ದರು ಎನ್ನಲಾಗಿದೆ. ..
ಬೆಂಗಳೂರು: ಮಂಗಳೂರು ಡಿವೈಎಸ್ ಪಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಗಣಪತಿ ಅವರ ಮೊಬೈಲ್ ಗೆ ಬಂದಿದ್ದ ಕರೆಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಗಣಪತಿ ಮಡಿವಾಳ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಜಪ್ತಿ ಮಾಡಿದ್ದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ದೂರುದಾರರಿಗೆ ಮರಳಿಸಿಲ್ಲ ಎಂಬ ಆರೋಪವಿತ್ತು. ಗಣಪತಿ ಸೇರಿ ನಾಲ್ವರು ಕಾರ್ಯನಿರ್ವಹಿಸಿದ್ದ ವೇಳೆಯಲ್ಲಾದ ಪ್ರಕರಣದ ವಿವರಗಳನ್ನು ನೀಡುವಂತೆ ಸರ್ಕಾರವು ನಗರ ಕಮಿಷನರ್ ಅವರಿಗೆ ಸೂಚನೆ ನೀಡಿತ್ತು. ಪ್ರಕರಣದ ಸಂಬಂಧ ಜೂನ್ 24ರಂದು ಮತ್ತೆ ಸರ್ಕಾರವು ಮಾಹಿತಿ ಕೋರಿತ್ತು
ಹಳೇಯ ಪ್ರಕರಣವನ್ನು ಮತ್ತೆ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿ ಡಿಜಿ ಕಚೇರಿಯಿಂದ ಕರೆ ಬಂದಿತ್ತು ಎಂದು ಹೇಳಲಾಗಿದೆ. ಗಣಪತಿ ಆತ್ಮಹತ್ಯೆಗೂ ಮುನ್ನ, ಹಳೇ ಪ್ರಕರಣದ ವಿಚಾರಣೆ ಸಂಬಂಧವಾಗಿ ಅವರ ಮೊಬೈಲ್‌ಗೆ ಡಿಜಿ ಕಚೇರಿ ಸಿಬ್ಬಂದಿಯೊಬ್ಬರು ಕರೆ ಮಾಡಿದ್ದರು ಎನ್ನಲಾಗಿದೆ.

