ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸೀಟು ದುಬಾರಿ

ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕೆಆರ್​ಎಲ್​ಎಂಪಿಸಿಎ) ಸರ್ಕಾರದ ಜತೆ ಹಗ್ಗ-ಜಗ್ಗಾಟ ನಡೆಸುವ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ  ಹಾಗೂ ಡೀಮ್ಡ್‌ ವಿಶ್ವವಿದ್ಯಾಲಯಗಳ ವೈದ್ಯಕೀಯ ಸೀಟು ಹಂಚಿಕೆ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲರ ಜೊತೆ ನಡೆದ ಸಭೆ ಯಶಸ್ವಿಯಾಗಿದೆ.

ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕೆಆರ್​ಎಲ್​ಎಂಪಿಸಿಎ) ಸರ್ಕಾರದ ಜತೆ ಹಗ್ಗ-ಜಗ್ಗಾಟ ನಡೆಸುವ ಮೂಲಕ ಶೇ.27 ರಿಂದ ಶೇ.41 ಶುಲ್ಕ ಏರಿಕೆ ಮಾಡಿಸಿಕೊಂಡಿದೆ.

ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೂ ಮುನ್ನ ಸೀಟು ಬಿಟ್ಟುಕೊಡದೆ ಶುಲ್ಕ ಹೆಚ್ಚಳ ಮಾಡುವಂತೆ ಪಟ್ಟು ಹಿಡಿದ ಕಾರಣ ಖಾಸಗಿಯವರ ಲಾಬಿಗೆ ಮಣಿದಿರುವ ಸರ್ಕಾರ, ಒಪ್ಪಂದಕ್ಕೆ ಸಹಿ ಹಾಕಿದೆ.

 ಸರ್ಕಾರ ಪರೋಕ್ಷವಾಗಿ ಸೋಲು ಒಪ್ಪಿಕೊಂಡಿದೆ. ಈ ಹಿಂದೆ ಕೂಡ ಖಾಸಗಿ ವೈದ್ಯ ಮತ್ತು ದಂತವೈದ್ಯಕೀಯ ಕಾಲೇಜುಗಳು ಶೇ.40 ಸೀಟು ಬಿಟ್ಟುಕೊಡದ ಸಂದರ್ಭದಲ್ಲಿ ಖಾಸಗಿ ಲಾಬಿಗೆ ಸರ್ಕಾರ ಮಣಿದಿತ್ತು. ಆಗಲೂ ಶೇ.30 ಶುಲ್ಕ ಹೆಚ್ಚಳದ ಒಪ್ಪಂದ ಸಹಿ ಹಾಕಿ ಖಾಸಗಿ ಕಾಲೇಜುಗಳ ಎದುರು ಸೋಲೊಪ್ಪಿಕೊಂಡಿತ್ತು. ಈ ಬಾರಿ ಕೂಡ ಅದು ಇದೇ ಕೆಲಸವನ್ನು ಮತ್ತೊಮ್ಮೆ ಮಾಡಿದಂತಾಗಿದೆ.

ಪರಸ್ಪರ ಒಪ್ಪಂದ ಶುಕ್ರವಾರ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕಾರವಾಗಿ ಕೆಆರ್​ಎಲ್​ಎಂಪಿಸಿಎ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ಶೇ.25 ಸೀಟುಗಳನ್ನು ಬಿಟ್ಟುಕೊಡಲಿದೆ. ಒಟ್ಟಾರೆ 88 ವೈದ್ಯ ಮತ್ತು 75 ದಂತವೈದ್ಯಕೀಯ ಸೀಟುಗಳು ಶೀಘ್ರದಲ್ಲೇ ಕೆಇಎಗೆ ಸೇರಲಿವೆ.

ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸಚಿವರು ನಡೆಸಿದ ಸಭೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳ ಸಂಘದ ಪದಾಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯ ಪ್ರತಿನಿಧಿಗಳು ಸಭೆಯಿಂದ ದೂರ ಉಳಿದಿದ್ದರು.

ವೈದ್ಯ ಶಿಕ್ಷಣ ಮಂಡಳಿ ಸರ್ಕಾರಿ ಕೋಟಾಗಳ ಸೀಟು ಹಂಚಿಕೆಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಲಿದೆ, ಕೌನ್ಸೆಲಿಂಗ್ ದಿನಾಂಕವನ್ನು ಶೀಘ್ರವೇ ಪ್ರಟಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com