ಬೆಂಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಭಿ ಅಲಿಯಾಸ್ ಅಭಿರಾಮ್ ನನ್ನು ಸಿಐಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಿಐಡಿ ಅಧಿಕಾರಿಗಳ ಪ್ರಕಾರ, ಅಭಿರಾಮ್ ಒಬ್ಬ ವಿದ್ಯಾರ್ಥಿಯಾಗಿದ್ದು, ತೇಜಸ್ ಗೌಡ ಅಪಹರಣ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಈ ಮುಂಚೆ ಅಪಹರಣಕ್ಕೆ ಸಹಕರಿಸಿದ ಆರೋಪದ ಮೇಲೆ ರಾಜ್ಯ ಬಜರಂಗದಳದ ಸದಸ್ಯ ಪ್ರದೀಪ್ ನನ್ನು ಬಂಧಿಸಲಾಗಿತ್ತು.
ಪ್ರಕರಣದ ಇತರೆ ಪ್ರಮುಖ ಆರೋಪಿಗಳಾದ ಪ್ರವೀಣ್ ಖಾಂಡ್ಯ ಹಾಗೂ ನವೀನ್ ಶೆಟ್ಟಿಯ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದು, ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ಸಹ ಸಿಐಡಿ ಘೋಷಿಸಿದೆ.
ತೇಜಸ್ ಗೌಡನ ಅಪಹರಣ ಹಾಗೂ ಆನಂತರದ ಬೆಳವಣಿಗೆಗಳನ್ನು ಅವಲೋಕಿಸಿದಾಗ ಪ್ರವೀಣ್ ಖಾಂಡ್ಯ ಈ ಹಿಂದೆ ಸಹ ಮಲೆನಾಡಿನ ವ್ಯಾಪಾರಿಗಳು, ಫೈನಾನ್ಷಿಯರ್‌ಗಳು ಸೇರಿದಂತೆ ಸಿರಿವಂತರನ್ನು ಬೆದರಿಸಿ ಹಣ ಸುಲಿಗೆ ಮಾಡಿರುವ ಅನುಮಾನಗಳಿವೆ.