
ಬೆಂಗಳೂರು: ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೊನೆಗೂ ಪರಿಷ್ಕೃತ ಮಾರ್ಗಸೂಚಿ ರೂಪಿಸಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಹೊಸ ಮಾರ್ಗಸೂಚಿ ಪ್ರಕಾರ ಕೈದಿಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಹೊಸ ಮಾರ್ಗಸೂಚಿಯ ಅನುಸಾರ, ಕೇಂದ್ರ ಸರ್ಕಾರದ ಕಾನೂನುಗಳ ಅನ್ವಯ ಹಾಗೂ ಸಿಬಿಐ, ಎನ್‌ಐಎ ತನಿಖೆಯಲ್ಲಿ ಶಿಕ್ಷೆಗೊಳಗಾದ ಕೈದಿಗಳ ಜೊತೆಗೆ ಭಯೋತ್ಪಾದನೆ, ರಾಜದ್ರೋಹ, ಎರಡಕ್ಕಿಂತ ಮೂರು ಕೊಲೆ ಪ್ರಕರಣಗಳಲ್ಲಿ ಅಪರಾಧಿಯಾದವರು, ಶಸ್ತ್ರಸಜ್ಜಿತ ದರೋಡೆಕೋರರು, ಸುಪಾರಿ ಕೊಲೆಗಾರರು, ಕಳ್ಳಸಾಗಣೆ ದಾರರು, ಮಾದಕ ದ್ರವ್ಯ ಸಾಗಣೆ ಮತ್ತು ಮಾರಾಟ ಕೃತ್ಯಗಳ ಅಪರಾಧಿಗಳು, ಅತ್ಯಾಚಾರ, ದರೋಡೆ, ಕೊಲೆ ಹಾಗೂ ಜೈಲು ಸಿಬ್ಬಂದಿ ಕೊಲೆ ಅಪರಾಧಿಗಳನ್ನು ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಸಿಆರ್‌ಪಿಸಿ (ದಂಡ ಪ್ರಕ್ರಿಯಾ ಸಂಹಿತೆ) ಕಲಂ 433 ಎ ಅನುಸಾರ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರೆ ಮಾತ್ರ ಅವರಿಗೆ ಹೊಸ ಮಾರ್ಗಸೂಚಿ ಅನ್ವಯವಾಗುತ್ತದೆ.
ಜೀವಾವಾಧಿ ಶಿಕ್ಷೆಗೆ ಒಳಪಟ್ಟಿರುವ ಪುರುಷ ಕೈದಿಯು ತನ್ನ ಶಿಕ್ಷಾ ಅವಧಿಯಲ್ಲಿ ಯಾವುದೇ ಕಡಿತವಿಲ್ಲದೆ 10 ವರ್ಷ ಜೈಲು ಶಿಕ್ಷೆ ಪೂರೈಸಿದ್ದು 65 ವರ್ಷ ದಾಟಿದ್ದರೆ, ಇದೇ ರೀತಿಯಲ್ಲಿ ಏಳು ವರ್ಷ ಸತತವಾಗಿ ಶಿಕ್ಷೆಗೊಳಗಾದ 60 ವರ್ಷ ದಾಟಿದ ಮಹಿಳಾ ಕೈದಿಗಳು ವಿನಾಯ್ತಿಗೆ ಒಳಪಡಲಿದ್ದಾರೆ.
Advertisement