ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಕೇಂದ್ರ ಸೇವೆಗೆ ಮೊಹಾಂತಿ ನಿಯೋಜನೆ

ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಣಬ್ ಮೊಹಾಂತಿ ಅವರನ್ನು ರಾಜ್ಯಸರ್ಕಾರವೇ ಕೇಂದ್ರ ಸರ್ಕಾರದ ಸೇವೆಗೆ ತೆರಳಲು
ಪ್ರಣಬ್ ಮೊಹಾಂತಿ
ಪ್ರಣಬ್ ಮೊಹಾಂತಿ

ಬೆಂಗಳೂರು: ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ  ಪ್ರಣಬ್ ಮೊಹಾಂತಿ ಅವರನ್ನು ರಾಜ್ಯಸರ್ಕಾರವೇ ಕೇಂದ್ರ ಸರ್ಕಾರದ ಸೇವೆಗೆ ತೆರಳಲು ಅಧಿಕೃತವಾಗಿ ಅನುಮತಿ ನೀಡಿದೆ.

ಸದ್ಯ, ಲೋಕಾಯುಕ್ತ ಡಿಐಜಿ ಆಗಿದ್ದ ಪ್ರಣಬ್ ಮೊಹಾಂತಿ, ಗಣಪತಿ ಪ್ರಕರಣದಲ್ಲಿ ಎರಡನೇ ಆರೋಪಿ ಆಗಿದ್ದರು. ಮೊಹಾಂತಿ ಆಧಾರ್ ಕಾರ್ಡ್ ಪ್ರಾಧಿಕಾರದ ಸೇವೆಗೆ ತೆರಳಲಿದ್ದು , ಡೆಪ್ಯೂಟಿ ಜನರಲ್ ಆಗಿ ಬೆಂಗಳೂರಲ್ಲೇ ಕಾರ್ಯನಿರ್ವಹಿಸಲಿದ್ದಾರೆ.

ಮೊಹಾಂತಿ ವಿರುದ್ಧ ಈಗಾಗಲೇ ಮಡಿಕೇರಿ ಜಿಲ್ಲಾ ಕೋರ್ಟ್ ಆದೇಶದಂತೆ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ FIR ದಾಖಲಾಗಿದೆ. ಮಾಜಿ ಸಚಿವ ಜಾರ್ಜ್​ ಮೊದಲನೇ ಆರೋಪಿಯಾದರೆ, ಮೊಹಾಂತಿ ಎರಡನೆಯವರು, ಗುಪ್ತದಳದ ಎಡಿಜಿಪಿ ಎ.ಎಂ. ಪ್ರಸಾದ್​ ಮೂರನೇ ಆರೋಪಿ. ಮಡಿಕೇರಿ ಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸಚಿವ ಜಾರ್ಜ್ ಮತ್ತು, ಇಬ್ಬರು ಐಪಿಎಸ್ ಅಧಿಕಾರಿಗಳಾದ ಪ್ರಸಾದ್ ಮತ್ತು ಮೊಹಾಂತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತ ಗಣಪತಿ ಪುತ್ರ ನೇಹಲ್ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com