ನೀಟ್ 2ನೇ ಹಂತದ ಪರೀಕ್ಷೆ ಪ್ರಗತಿಯಲ್ಲಿ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ಎರಡನೇ ಹಂತದ ರಾಷ್ಟ್ರೀಯ ಅರ್ಹತಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ಎರಡನೇ ಹಂತದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ಎನ್ ಇಇಟಿ-2) ಭಾನುವಾರ ದೇಶಾದ್ಯಂತ ನಡೆಯುತ್ತಿದೆ.
ನಮ್ಮ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಸಿಬಿಎಸ್ ಇ ವರದಿ ಪ್ರಕಾರ ಇಂದಿನ ಪರೀಕ್ಷೆಗೆ ಸುಮಾರು 4.7 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹೇರ್ ಕ್ಲಿಪ್, ಬಳೆ, ಹೇರ್ ಬ್ಯಾಂಡ್, ಕಿವಿಯೋಲೆ, ಶೂ, ಬೆಲ್ಟ್ ಇತ್ಯಾದಿಗಳನ್ನು ಧರಿಸಲು ಬಿಟ್ಟಿಲ್ಲ. ಅಭ್ಯರ್ಥಿಗಳನ್ನು ಕೊಠಡಿಯೊಳಗೆ ಬಿಡುವ ಮುನ್ನ ಸಿಬ್ಬಂದಿ ಸಂಪೂರ್ಣ ಪರೀಕ್ಷಿಸಿ ಬಿಡುವ ದೃಶ್ಯ ಕಂಡುಬಂತು. ಅನೇಕ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಹೇರ್ ಕ್ಲಿಪ್, ಹೇರ್ ಬ್ಯಾಂಡ್ ಇತ್ಯಾದಿಗಳನ್ನು ತೆಗೆಯುವುದು ಕಂಡುಬಂತು.

ಪರೀಕ್ಷೆಯಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಸುವುದನ್ನು ತಡೆಯಲು ಇಷ್ಟೊಂದು ಕಟ್ಟುನಿಟ್ಟು ಅಳವಡಿಸಲಾಗಿದೆ ಎಂದು ಪರೀಕ್ಷಕರು ತಿಳಿಸಿದ್ದಾರೆ. ಬೆಂಗಳೂರಿನ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಲು 3 ನಿಮಿಷ ತಡವಾದ 8 ಮಂದಿ ವಿದ್ಯಾರ್ಥಿಗಳನ್ನು ಒಳಗೆ ಬಿಡದ ಘಟನೆ ನಡೆಯಿತು. ಅವರು ಶಾಲೆಯ ಗೇಟನ್ನು ದಾಟಿ ಒಳಗೆ ಹೋಗಲು ಯತ್ನಿಸಿದಾಗ ಶಾಲಾ ಸಿಬ್ಬಂದಿ ತಡೆದರು. ಇದರಿಂದ ಕೆಲಕಾಲ ಶಾಲಾ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪೋಷಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ದೇಶಾದ್ಯಂತ ಏಕರೂಪದ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಮೇನಲ್ಲಿ ನಡೆದಿದ್ದ ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಯನ್ನು ನೀಟ್-1 ಎಂದು ಪರಿಗಣಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com