ಕುಡಿದು ದಾಂಧಲೆ ಮಾಡಿದ ಸಚಿವ ರೈ ಪುತ್ರ, ಸ್ನೇಹಿತರಿಗೆ ಗ್ರಾಮಸ್ಥರಿಂದ ಥಳಿತ!

ಕಂಠಪೂರ್ತಿ ಕುಡಿದು ದಾಂಧತೆ ಮಾಡಿ ಅರಣ್ಯ ಸಚಿವ ರಮಾನಾಥ್‌ ರೈ ಅವರ ಪುತ್ರ ದೀಪಕ್‌ ಹಾಗೂ ಆತನ ಮೂವರು ಸ್ನೇಹಿತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ...
ದೀಪಕ್ ರೈ
ದೀಪಕ್ ರೈ
Updated on
ಮಡಿಕೇರಿ: ಕಂಠಪೂರ್ತಿ ಕುಡಿದು ದಾಂಧತೆ ಮಾಡಿ ಅರಣ್ಯ ಸಚಿವ ರಮಾನಾಥ್‌ ರೈ ಅವರ ಪುತ್ರ ದೀಪಕ್‌ ಹಾಗೂ ಆತನ ಮೂವರು ಸ್ನೇಹಿತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಭಾನುವಾರ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ರಮಾನಾಥ್ ರೈ ಪುತ್ರ ದೀಪಕ್ ರೈ ಹಾಗೂ ಸ್ನೇಹಿತರು ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲದ ಎಸ್ಟೇಟ್ ಬಳಿ ಕಾರು ನಿಲ್ಲಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ಬುದ್ಧಿ ಹೇಳಿದ ಕಾಫಿ ತೋಟದ ಮಾಲೀಕನೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ನಾನು ಮಿನಿಷ್ಟರ್ ಮಗ, ನಿಮ್ಮನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ದೀಪಕ್ ರೈ ಧಮ್ಕಿ ಹಾಕಿದಾಗ ಸ್ಥಳೀಯರು ಥಳಿಸಿ ಶ್ರೀಮಂಗಲ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಮಾನಾಥ್ ರೈ ಅವರು, ನನ್ನ ಮಗ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ನನ್ನ ಮಗ ತಪ್ಪು ಮಾಡಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಿ. ಆದರೆ ಮಕ್ಕಳು ಎಲ್ಲಿ ಹೋಗಿ ಏನು ತಪ್ಪು ಮಾಡುತ್ತಾರೆ ಎಂದು ಅವರ ಹಿಂದೆಯೇ ಹೋಗಿ ನೋಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com