ಅಂಗನವಾಡಿ ಮಕ್ಕಳಿಗೆ 'ಕೆನೆಹಾಲು' ಭಾಗ್ಯ: ಸಂಪುಟ ಸಮ್ಮತಿ

ರಾಜ್ಯದ ಅಂಗನವಾಡಿಗಳಲ್ಲಿನ ಆರು ತಿಂಗಳಿಂದ 6 ವರ್ಷಗಳ ವರೆಗಿನ ಸುಮಾರು 39 ಲಕ್ಷ ಮಕ್ಕಳಿಗೆ ಇನ್ಮುಂದೆ ಕೆನೆಸಹಿತ ಹಾಲು ವಿತರಿಸುವ ತೀರ್ಮಾನಕ್..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದ ಅಂಗನವಾಡಿಗಳಲ್ಲಿನ ಆರು ತಿಂಗಳಿಂದ 6 ವರ್ಷಗಳ ವರೆಗಿನ ಸುಮಾರು 39 ಲಕ್ಷ ಮಕ್ಕಳಿಗೆ ಇನ್ಮುಂದೆ ಕೆನೆಸಹಿತ ಹಾಲು ವಿತರಿಸುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಸಮ್ಮತಿಸಿದೆ.

ಕ್ಷೀರಭಾಗ್ಯ ಯೋಜನೆಯ ಫಲಾನುಭವಿ 1.10 ಲಕ್ಷ ಮಕ್ಕಳ ಪೈಕಿ ಅಂಗನವಾಡಿಗಳಲ್ಲಿನ 39 ಲಕ್ಷ ಮಕ್ಕಳಿಗೆ ಕೆನೆರಹಿತವಾಗಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಿಸುವ ಉದ್ದೇಶದಿಂದ ಇನ್ಮುಂದೆ ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು ವಿತರಣೆಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಉದ್ದೇಶಕ್ಕೆ 42.50 ಕೋಟಿ ರೂ. ಹೆಚ್ಚುವರಿ ವೆಚ್ಚ ಭರಿಸಲು ಸಂಪುಟ ಒಪ್ಪಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಪಡಿತರ ವ್ಯವಸ್ಥೆಯಡಿ ಅಯೋಡಿನ್ ಹಾಗೂ ಕಬ್ಬಿಣಾಂಶ ಹೊಂದಿರುವ ದ್ವಿಗುಣ ಬಲವರ್ಧಿತ ಉಪ್ಪು ವಿತರಣೆ ಮಾಡಲು ಮತ್ತು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ 8.23 ಕೋಟಿ ರೂ. ವೆಚ್ಚದಲ್ಲಿ ಶುಚಿ ಸಂಭ್ರಮ ಹಾಗೂ ಸಿರಿಗಂಧ ಕಿಟ್‌ಗಳನ್ನು ವಿತರಣೆ ಮಾಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿತು.

ರಾಜ್ಯದ 182 ಉಗ್ರಾಣಗಳ ಮೇಲೆ ಸೌರ ಫಲಕ ಅಳವಡಿಸಿ ಒಟ್ಟು 162 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಪ್ರಸ್ತಾವನೆ ಸಂಪುಟದ ಮುಂದೆ ಬಂತಾದರೂ, ಈಗಾಗಲೇ ಸೌರ ಫಲಕ ಅಳವಡಿಸಲಾಗಿರುವ ಸುಮಾರು 68 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನೆ ಪ್ರಸ್ತಾವನೆಗಳಿಗೆ ಮಾತ್ರ ಸಂಪುಟ ಅನುಮೋದನೆ ನೀಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com