ಬಸ್ ಗಳಿಗೆ ಮುಷ್ಕರವಾದರೇನಂತೆ ಟ್ವಿಟರ್ ಮೂಲಕ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳು!

ಶ್ರೀ ಭಗವಾನ್ ಮಹಾವೀರ್ ಜೈನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತೆ ಪಾಠ ಕೇಳಿದ್ದಾರೆ. ಇದು ಸಾಧ್ಯವಾಗಿರುವುದು ಟ್ವಿಟರ್ ನಿಂದ.
ಟ್ವಿಟರ್
ಟ್ವಿಟರ್

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಗಳ ಸಂಚಾರ ಇಲ್ಲದೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಆದರೆ ಶ್ರೀ ಭಗವಾನ್ ಮಹಾವೀರ್ ಜೈನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತೆ ಪಾಠ ಕೇಳಿದ್ದಾರೆ. ಇದು ಸಾಧ್ಯವಾಗಿರುವುದು ಟ್ವಿಟರ್ ನಿಂದ.
ಭಗವಾನ್ ಮಹಾವೀರ್ ಜೈನ್ ವಿವಿಯ ಕಲಾ ವಿಭಾಗದ ಪ್ರಾಧ್ಯಾಪಕ ಸಚಿನ್ ತಂತ್ರಿ ಟ್ವಿಟರ್ ಮೂಲಕವೇ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿದ್ದಾರೆ. "ಹತ್ತು ದಿನಗಳ ಹಿಂದೆ ನೇರ ಪ್ರಸಾರವಾದ ದೃಶ್ಯಾವಳಿಗಳಿಗೆ ಅನುಕೂಲವಾಗುವ ಟ್ವಿಟರ್ ನ ಪೆರಿಸ್ಕೋಪ್ ಅಪ್ಲಿಕೇಷನ್ ಬಗ್ಗೆ ಚರ್ಚೆ ನಡೆಸಿದ್ದೆವು. ಇದರಿಂದ ಪ್ರಥಮ ವರ್ಷದ ಬಿಎ ಜರ್ನಲಿಸಂ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ತರಗತಿಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ಸಚಿನ್ ತಂತ್ರಿ ತಿಳಿಸಿದ್ದಾರೆ.
ಟ್ವಿಟರ್ ಆಪ್ ಮೂಲಕ ತರಗತಿಗಳನ್ನು ನಡೆಸಲು, ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್, ಟ್ವಿಟರ್ ಖಾತೆ ಹಾಗು ಪೆರಿಸ್ಕೋಪ್ ಆಪ್  ಇದ್ದಾರೆ ಸಾಕು ಎನ್ನುತ್ತಾರೆ ಸಚಿನ್ ತಂತ್ರಿ. ಸತತ ಎರಡು ದಿನಗಳು ಸಾರಿಗೆ ಮುಷ್ಕರ ನಡೆಯುವ ಹಿನ್ನೆಲೆಯಲ್ಲಿ ಬಸ್ ಗಳಿಲ್ಲದೆ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಟ್ವಿಟರ್ ಮೂಲಕ ತರಗತಿಗಳನ್ನು ನಡೆಸುವಂತೆ ವಿದ್ಯಾರ್ಥಿಯೊಬ್ಬರು ಸಲಹೆ ನೀಡಿದ್ದರು ಎಂದು, ಸೋಮವಾರ ಬೆಳಿಗ್ಗೆ 9 ಕ್ಕೆ ಟ್ವಿಟರ್ ನ ಪೆರಿಸ್ಕೋಪ್ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಎಲ್ಲರಿಗೂ ವಾಟ್ಸ್ ಆಪ್ ಮೂಲಕ ಸೂಚನೆ ನೀಡಲಾಯಿತು. 10:45 ಕ್ಕೆ ತರಗತಿಗಳು ಪ್ರಾರಂಭವಾದವು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.
79 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ತರಗತಿಯಲ್ಲಿದ್ದರೆ 55 ವಿದ್ಯಾರ್ಥಿಗಳು ಆಪ್ ಮೂಲಕ ತರಗತಿಯಲ್ಲಿ ಹೇಳಲಾದ ಪಾಠವನ್ನು ಕೇಳಿದರು, ಕ್ರೀಡಾ ಸ್ಪರ್ಧೆಗಾಗಿ ಗುವಾಹಟಿಗೆ ತೆರಳಿದ್ದ ಓರ್ವ ವಿದ್ಯಾರ್ಥಿ ಸಹ ಟ್ವಿಟರ್ ಮೂಲಕ ತರಗತಿಗೆ ಹಾಜರಾಗಿದ್ದ ಎಂದು ಸಚಿನ್ ತಂತ್ರಿ ತಿಳಿಸಿದ್ದಾರೆ. ಟ್ವಿಟರ್ ನ ಈ ಆಪ್ ನಲ್ಲಿ 20 ನಿಮಿಷಗಳ ಕಾಲ ಮಾತ್ರ ನೇರ ಪ್ರಸಾರದ ವಿಡಿಯೋ ನೋಡಲು ಸಾಧ್ಯವಿದ್ದು, ಒಂದು ಗಂಟೆಯ ಅವಧಿಯ ತರಗತಿಯಲ್ಲಿ ಮೂರೂ ಬಾರಿ ನೇರ ಪ್ರಸಾರ ಮಾಡಲಾಗಿದೆ, ಕಡಿಮೆ ಅವಧಿಯ ಕುರಿತು ಟ್ವಿಟರ್ ಗೆ ಪಾತ್ರ ಬರೆಯುವುದಾಗಿ ಸಚಿನ್ ತಂತ್ರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com