1988ರ ನಂತರ ಬೆಂಗಳೂರಿನಲ್ಲಿ ಈ ವರ್ಷ ಅಧಿಕ ಮಳೆ

ಮೊನ್ನೆ ಗುರುವಾರ ರಾತ್ರಿಯಿಂದ ನಿನ್ನೆ ಸಾಯಂಕಾಲದವರೆಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮೊನ್ನೆ ಗುರುವಾರ ರಾತ್ರಿಯಿಂದ ನಿನ್ನೆ ಸಾಯಂಕಾಲದವರೆಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಆದ ಅನಾಹುತ, ಅವಾಂತರ ನಗರ ವಾಸಿಗಳಿಗೆ ಗೊತ್ತೇ ಇದೆ. 
ದೊಡ್ಡತೊಗೂರಿನಲ್ಲಿ ಗುರುವಾರದಿಂದ ಶುಕ್ರವಾರದವರೆಗೆ 24 ಗಂಟೆಗಳಲ್ಲಿ 120 ಮಿಲಿ ಮೀಟರ್ ಮಳೆ ಬಿದ್ದಿದೆ. ಭಾರತೀಯ ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ, 1988ರ ಜುಲೈ 18ರ ನಂತರ ನಿನ್ನೆಯೇ ಅತ್ಯಂತ ಹೆಚ್ಚು 123.5 ಮಿಲಿ ಮೀಟರ್ ಮಳೆ ಸುರಿದಿದೆ.
ರಾಜ್ಯದಲ್ಲಿ ಈ ವರ್ಷ ರಾಮನಗರ ಜಿಲ್ಲೆಯ ಆಲಿಮಾರನಹಳ್ಳಿಯಲ್ಲಿ ಅತ್ಯಂತ ಹೆಚ್ಚು 154 ಮಿಲಿ ಮೀಟರ್ ಮಳೆಯಾಗಿದೆ. ವರ್ತೂರಿನಲ್ಲಿ 103 ಮಿಲಿ ಮೀಟರ್ ಮಳೆ ಬಿದ್ದಿದೆ.
ಪ್ರಸಕ್ತ ಮುಂಗಾರಿನಲ್ಲಿ ಗುರುವಾರ ರಾತ್ರಿ  ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ಬರಗಾಲ ಮತ್ತು ನಿರ್ವಹಣಾ ಕೇಂದ್ರದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 91 ಕೇಂದ್ರಗಳಲ್ಲಿ 19 ಕೇಂದ್ರಗಳಲ್ಲಿ 64.5 ಮಿಲಿ ಮೀಟರ್ ಮತ್ತು 124 ಮಿಲಿ ಮೀಟರ್ ಮಳೆ ಬಿದ್ದಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆ ವರ್ತೂರು(103 ಮಿಲಿ ಮೀಟರ್), ಸಿಂಗಸಂದ್ರದಲ್ಲಿ (98ಮಿಲಿ ಮೀಟರ್), ಕುಮಾರಸ್ವಾಮಿ ಲೇ ಔಟ್ ಮತ್ತು ಬಿಲೆಕಹಳ್ಳಿಯಲ್ಲಿ (94ಮಿಲಿ ಮೀಟರ್) ಮಳೆಯಾಗಿದೆ. ಸರಾಸರಿ ಮಳೆ ಪ್ರಮಾಣ ಈ ವರ್ಷ ಬೆಂಗಳೂರಿನಲ್ಲಿ 52.5 ಮಿಲಿ ಮೀಟರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com