ಕೂಡಲಿ ಶೃಂಗೇರಿ ಪೀಠದ ಶಂಕರಾಚಾರ್ಯ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿಗಳು ಬ್ರಹ್ಮೈಕ್ಯ

ಶಿವಮೊಗ್ಗದ ಕೂಡಲಿಯಲ್ಲಿರುವ ಕೂಡಲಿ ಶೃಂಗೇರಿ ಹಿರಿಯ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿಗಳು(96) ಜೂ.10 ರಂದು ತಡರಾತ್ರಿ 1:30ಕ್ಕೆ ಬ್ರಹ್ಮೈಕ್ಯರಾಗಿದ್ದಾರೆ.
ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿಗಳು
ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿಗಳು
ಕೂಡಲಿ: ಶಿವಮೊಗ್ಗದ ಕೂಡಲಿಯಲ್ಲಿರುವ ಕೂಡಲಿ ಶೃಂಗೇರಿ ಪೀಠದ ಹಿರಿಯ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿಗಳು(96) ಜೂ.10 ರಂದು ತಡರಾತ್ರಿ 1:30ರ ವೇಳೆ ಬ್ರಹ್ಮೈಕ್ಯರಾಗಿದ್ದಾರೆ. 
ಕಳೆದ ಒಂದು ವರ್ಷದಿಂದ ವಯೋಸಹಜ ಅನಾರೋಗ್ಯ ಎದುರಿಸುತ್ತಿದ್ದ ಶ್ರೀಗಳು ತಡರಾತ್ರಿ ಬ್ರಹ್ಮೈಕ್ಯರಾಗಿದ್ದಾರೆ. ಕೂಡಲಿ ಶೃಂಗೇರಿ ಮಠದ ಆವರಣದಲ್ಲಿ ಸಂಜೆ ವೇಳೆಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಮೂಲತಃ ಚಿತ್ರದುರ್ಗದವರಾಗಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಲಿಂಗಯ್ಯ ಶಾಸ್ತ್ರಿ. ಪೂರ್ವಾಶ್ರಮದಲ್ಲಿ(ಸನ್ಯಾಸಕ್ಕೂ ಮುನ್ನ) ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1976ರಲ್ಲಿ ಅಂದಿನ ಕೂಡಲಿ ಶೃಂಗೇರಿ ಪೀಠದ ಅಧಿಪತಿಗಳಾಗಿದ್ದ ವಿದ್ಯಾಭಿನವ ನೃಸಿಂಹ ಭಾರತೀ ಸ್ವಾಮಿಗಳಿಂದ ತುರೀಯಾಶ್ರಮ (ಸನ್ಯಾಸ) ಸ್ವೀಕರಿಸಿ, ಸಚ್ಚಿದಾನಂದ ವಾಲುಕೇಶ್ವರ ಭಾರತಿ ಎಂಬ ಯೋಗಪಟ್ಟ ಪಡೆದಿದ್ದರು. 
ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿಗಳ ಉತ್ತರಾಧಿಕಾರಿಗಳಾಗಿರುವ ಕೂಡಲಿ ಶೃಂಗೇರಿ ಪೀಠದ ಕಿರಿಯ ಸ್ವಾಮಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳು  ಹಿರಿಯ ಶ್ರೀಗಳ ಅಂತ್ಯಕ್ರಿಯೆ ನಡೆಸಲಿದ್ದಾರೆ. ಬ್ರಹ್ಮೈಕ್ಯರಾಗಿರುವ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿಗಳ ಅವರ ಅವಧಿಯಲ್ಲಿ ಕೂಡಲಿ ಶೃಂಗೇರಿ ಪೀಠ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಶ್ರೀಗಳು ದಕ್ಷಿಣ ಭಾರತವಷ್ಟೇ ಅಲ್ಲದೇ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದಲ್ಲೂ ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com