ಕೆಎಸ್ ಆರ್ ಟಿಸಿ: ಪ್ರಯಾಣ ದರ ಶೇಕಡಾ 20 ಕಡಿತ

ಜೂನ್ 13ರಿಂದ 30ರವರೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜೂನ್ 13ರಿಂದ 30ರವರೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣ ದರವನ್ನು ಕಡಿತಗೊಳಿಸಿದೆ.

ರಾಜಹಂಸ, ವೈಭವ, ಐರಾವತ, ಐರಾವತ ಕ್ಲಬ್‌ ಕ್ಲಾಸ್‌, ಐರಾವತ ಡೈಮಂಡ್‌ ಕ್ಲಾಸ್‌, ಎಸಿ ಸ್ಲೀಪರ್‌, ನಾನ್‌ ಎಸಿ ಸ್ಲೀಪರ್‌, ಐರಾವತ ಬ್ಲಿಸ್‌, ಐರಾವತ ಸುಪೀರಿಯಾ ಸಾರಿಗೆಗಳಿಗೆ ಹಾಲಿ ವಿಧಿಸುತ್ತಿರುವ ಪ್ರಯಾಣ ದರಗಳನ್ನು ಕಡಿಮೆ ಮಾಡಲಾಗಿದೆ.

ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಪ್ರಯಾಣಿಸುವ ಪ್ರಯಾಣಿಕರುಗಳಿಗೆ ಹಾಲಿ ಇರುವ ದರದಲ್ಲಿ ಶೇಕಡಾ 20ರವರೆಗೆ ಕಡಿಮೆ ಪ್ರಯಾಣ ದರಗಳನ್ನು ನಿಗದಿಪಡಿಸಲಾಗಿದೆ. ವಾರಾಂತ್ಯದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಪ್ರಯಾಣ ದರ ಶೇಕಡಾ 10ರಷ್ಟುಕಡಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com